October 16, 2026
Friday, October 16, 2026
spot_img

Viral | ಮೈತುಂಬಾ ಸೊಳ್ಳೆಪರದೆ! ರಾತ್ರಿ ಕೆಲಸ ಮಾಡೋ ವಾಚ್‌ಮೆನ್‌ಗೆ ಸೊಳ್ಳೆಗಳದ್ದೇ ಕಾಟವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉದ್ಯೋಗ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಅತೀ ಪ್ರಮುಖವಾಗಿದ್ದರೂ ಇತ್ತೀಚೆಗೆ ಕಠಿಣ ಕೆಲಸದ ಒತ್ತಡದಿಂದ ಹಿಂಸೆ ಅನುಭವಿಸುತ್ತಿದ್ದವರು ಅನೇಕರು ಇದ್ದಾರೆ. ಈ ನಡುವೆ ಭದ್ರತಾ ಸಿಬ್ಬಂದಿಯೊಬ್ಬರು ರಾತ್ರಿ ಪಾಳಿಯಲ್ಲಿ ಸೊಳ್ಳೆ ಪರದೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.

ಹೈದರಾಬಾದ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ವೊಬ್ಬರು ಸೊಳ್ಳೆ ಪರದೆಯಡಿಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಈ ಕ್ಲಿಪ್ ವಸತಿ ಕೇಂದ್ರದಲ್ಲಿ ಗಾರ್ಡ್‌ಗಳು ಎದುರಿಸುತ್ತಿರುವ ಪರಿಸ್ಥಿತಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೆಕ್ಯೂರಿಟಿ ಗಾರ್ಡ್ ಗೆ ರಾತ್ರಿ ಕೆಲಸ ಇದ್ದಿದ್ದರಿಂದ ಎಚ್ಚರವಾಗಿದ್ದು ಕೊಂಡೆ ತನ್ನ ಜವಾಬ್ದಾರಿ ಯನ್ನು ನಿಭಾಯಿಸಿಬೇಕಾಗುತ್ತದೆ. ಹೀಗಾಗಿ ಕರ್ತವ್ಯ ಸಮಯದಲ್ಲಿ ಅವರು ಕುರ್ಚಿಯ ಮೇಲೆ ಕುಳಿತಿರುವುದು ಕಾಣಬಹುದು. ಆದರೆ ಅವರು ಸೊಳ್ಳೆ ಪರದೆ ಮೈ ಮೇಲೆ ಹಾಕಿಕೊಂಡೆ ಕೆಲಸ ಮಾಡುತ್ತಿದ್ದಾರೆ.

Must Read