April 19, 2026
Sunday, April 19, 2026
spot_img

CINE | ಕಾಂತಾರ, ಕೆಜಿಎಫ್ ಆಯ್ತು.. ಈಗ ಹೊಂಬಾಳೆ ಅಂಗಳದಿಂದ ಬರ್ತಿದ್ದಾನೆ ಪರಶುರಾಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕೆಜಿಎಫ್’ ಮತ್ತು ‘ಕಾಂತಾರ’ದಂತಹ ಜಾಗತಿಕ ಮಟ್ಟದ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲಮ್ಸ್, ಈಗ ಅನಿಮೇಷನ್ ಲೋಕದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದೆ. ಕಳೆದ ವರ್ಷ ‘ಮಹಾವತಾರ ನರಸಿಂಹ’ ಚಿತ್ರವನ್ನು ಯಶಸ್ವಿಯಾಗಿ ವಿತರಣೆ ಮಾಡಿ ಗೆದ್ದಿದ್ದ ಹೊಂಬಾಳೆ, ಇದೀಗ ಈ ಸರಣಿಯ ಎರಡನೇ ಭಾಗ ‘ಮಹಾವತಾರ ಪರಶುರಾಮ’ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ವಿಶೇಷವೆಂದರೆ, ಈ ಬಾರಿ ಹೊಂಬಾಳೆ ಸಂಸ್ಥೆಯು ಕೇವಲ ವಿತರಣೆಯಷ್ಟೇ ಅಲ್ಲದೆ, ನಿರ್ಮಾಣದಲ್ಲೂ ನೇರವಾಗಿ ಕೈಜೋಡಿಸಿದೆ.

‘ಯಾವಾಗ ಧರ್ಮ ಬೀಳುತ್ತದೆಯೋ, ಆಗೆಲ್ಲ ಪರಶು ಏಳುತ್ತದೆ’ ಎಂಬ ಪವರ್‌ಫುಲ್ ಟ್ಯಾಗ್‌ಲೈನ್ ಮೂಲಕ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವು ಮುಂದಿನ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕಿಂತಲೂ ತಾಂತ್ರಿಕವಾಗಿ ಅತ್ಯುನ್ನತ ಗುಣಮಟ್ಟವನ್ನು ಈ ಚಿತ್ರ ಹೊಂದಿರಲಿದೆ ಎಂಬುದು ಟೀಸರ್‌ನಲ್ಲಿ ಎದ್ದು ಕಾಣುತ್ತಿದೆ.

ಹೊಂಬಾಳೆ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಜಂಟಿಯಾಗಿ ಮಹಾ ವಿಷ್ಣುವಿನ ಅವತಾರಗಳನ್ನು ತೆರೆಗೆ ತರುವ ಗುರಿ ಹೊಂದಿವೆ. ಪರಶುರಾಮನ ನಂತರ ಈ ಸರಣಿಯಲ್ಲಿ ಈ ಕೆಳಗಿನ ಸಿನಿಮಾಗಳು ಬರಲಿವೆ:

2029: ಮಹಾವತಾರ ರಘುರಾಮ (ಶ್ರೀರಾಮ)

ಮುಂದಿನ ಸರಣಿ: ಮಹಾವತಾರ ದ್ವಾರಕಾದೀಶ ಮತ್ತು ಮಹಾವತಾರ ಗೋಕುಲನಂದ (ಶ್ರೀಕೃಷ್ಣ)

ಕ್ಲೈಮ್ಯಾಕ್ಸ್: ಮಹಾವತಾರ ಕಲ್ಕಿ 1 ಮತ್ತು 2.

ಒಟ್ಟಿನಲ್ಲಿ, ವಿಜಯ್ ಕಿರಗಂದೂರು ಮತ್ತು ಶಿಲ್ಪಾ ಧವನ್ ಅವರ ಸಾರಥ್ಯದಲ್ಲಿ ಭಾರತೀಯ ಪೌರಾಣಿಕ ಕಥೆಗಳು ಅನಿಮೇಷನ್ ರೂಪದಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !