August 7, 2026
Friday, August 7, 2026
spot_img

ಚುನಾವಣಾ ಪ್ರಚಾರ ಒಂದು ಕಡೆ ಇರ್ಲಿ, ಮೊದಲು ‘ಝಲ್​ಮುರಿ’ ತಿನ್ನುವ: ಬಂಗಾಳದ ಫೇಮಸ್ ಸ್ನಾಕ್ ಸವಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಜೋರಾಗಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾರ್ಗ್ರಾಮ್‌ನಲ್ಲಿ ವಿಶೇಷ ಕ್ಷಣವೊಂದನ್ನು ಹಂಚಿಕೊಂಡರು. ಭರ್ಜರಿ ಸಭೆಗಳನ್ನುದ್ದೇಶಿಸಿ ಮಾತನಾಡಿದ ಬಳಿಕ, ಸ್ಥಳೀಯರ ನಡುವೆ ಬೆರೆತು ಬಂಗಾಳದ ಪ್ರಸಿದ್ಧ ತಿಂಡಿ ಸವಿದ ದೃಶ್ಯ ಗಮನ ಸೆಳೆಯಿತು.

ಬರ್ಜೋರಾ ಮತ್ತು ಬಲರಾಮ್‌ಪುರ ಪ್ರದೇಶಗಳಲ್ಲಿ ಸಭೆ ನಡೆಸಿದ ನಂತರ ಮೋದಿ ಜಾರ್ಗ್ರಾಮ್ ತಲುಪಿದರು. ಇಲ್ಲಿ ನಡೆದ ಕಾರ್ಯಕ್ರಮದ ಬಳಿಕ ಹೆಲಿಪ್ಯಾಡ್ ಕಡೆಗೆ ತೆರಳುತ್ತಿದ್ದ ವೇಳೆ, ರಸ್ತೆಬದಿಯಲ್ಲಿ ತಯಾರಾಗುತ್ತಿದ್ದ ‘ಝಲ್ ಮುರಿ’ ಅವರ ಗಮನ ಸೆಳೆಯಿತು. ತಕ್ಷಣವೇ ವಾಹನ ನಿಲ್ಲಿಸಲು ಸೂಚಿಸಿದ ಪ್ರಧಾನಿ, ಕಾರಿನಿಂದ ಇಳಿದು ಸ್ಥಳೀಯ ವ್ಯಾಪಾರಿಯ ಬಳಿ ಹೋಗಿ ಆ ತಿಂಡಿಯನ್ನು ಸವಿದರು.

ಕಡಲೆಕಾಯಿ, ಸಾಸಿವೆ ಎಣ್ಣೆ, ಈರುಳ್ಳಿ ಮತ್ತು ಮಸಾಲೆಗಳೊಂದಿಗೆ ತಯಾರಾಗುವ ಈ ಬಂಗಾಳಿ ವಿಶೇಷ ತಿಂಡಿಯನ್ನು ಸವಿಯುತ್ತಾ, ಮೋದಿ ಕೆಲಕಾಲ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ದೇಶದ ಪ್ರಧಾನಿಯೇ ರಸ್ತೆಬದಿ ತಿಂಡಿ ಸವಿಯುತ್ತಿರುವುದನ್ನು ಕಂಡ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದು, ಹಲವರು ಈ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಮೋದಿ, “ಬಂಗಾಳದ ರುಚಿ ಸದಾ ವಿಶಿಷ್ಟ. ಜಾರ್ಗ್ರಾಮ್‌ನ ಝಲ್ ಮುರಿ ನನ್ನ ದಿನವನ್ನು ಇನ್ನಷ್ಟು ಉತ್ಸಾಹದಿಂದ ತುಂಬಿತು” ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !