April 19, 2026
Sunday, April 19, 2026
spot_img

Viral | ಜುರೆಲ್ ಸ್ಟಂಪಿಂಗ್‌ಗೆ ಬೆಚ್ಚಿದ ಗ್ರೀನ್: ಫ್ಯಾನ್ಸ್ ಅಂತೂ ಫುಲ್ ಖುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2026ರ 28ನೇ ಪಂದ್ಯದಲ್ಲಿ ಕೇವಲ ಒಂದು ಕ್ಷಣದಲ್ಲೇ ಆಟದ ಗತಿ ಬದಲಿಸಿದ ಅದ್ಭುತ ಕ್ಷಣ ಎಲ್ಲರ ಗಮನ ಸೆಳೆದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಈ ಕದನದಲ್ಲಿ ವಿಕೆಟ್ ಕೀಪರ್ ಧ್ರುವ್ ಜುರೆಲ್ ತಮ್ಮ ಮಿಂಚಿನ ಸ್ಟಂಪಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್ ನೀಡಿದ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕ್ರೀಸ್‌ಗೆ ಬಂದ ಕ್ಯಾಮೆರೋನ್ ಗ್ರೀನ್ ವೇಗವಾಗಿ ರನ್‌ಗಳನ್ನು ಗಳಿಸಿ ಪಂದ್ಯವನ್ನು ತಿರುಗಿಸಲು ಯತ್ನಿಸಿದರು. ಕೇವಲ 13 ಎಸೆತಗಳಲ್ಲಿ 27 ರನ್ ಬಾರಿಸಿದ ಅವರು ಅಪಾಯಕಾರಿಯಾಗಿ ಕಾಣುತ್ತಿದ್ದ ವೇಳೆ ಸ್ಪಿನ್ನರ್ ರವಿ ಬಿಷ್ಣೋಯ್ ದಾಳಿ ಆರಂಭಿಸಿದರು.

ಐದನೇ ಓವರ್‌ನಲ್ಲಿ ನಡೆದ ಈ ಘಟನೆ ಪಂದ್ಯಕ್ಕೆ ತಿರುವು ನೀಡಿತು. ಬಿಷ್ಣೋಯ್ ಎಸೆದ ಚೆಂಡನ್ನು ಮುಂದೆ ಬಂದು ಆಡಲು ಯತ್ನಿಸಿದ ಗ್ರೀನ್ ಬಾಲ್ ಮಿಸ್ ಮಾಡಿದರು. ವಿಕೆಟ್ ಕೀಪರ್ ಧ್ರುವ್ ಜುರೇಲ್ ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸಿ, ದೂರ ಸರಿಯುತ್ತಿದ್ದ ಚೆಂಡನ್ನು ಹಿಡಿದು ಅಚ್ಚರಿ ವೇಗದಲ್ಲಿ ಸ್ಟಂಪ್‌ಗೆ ಎಸೆದರು. ಅವರು ಬಿದ್ದರೂ ಸಹ ಗುರಿ ತಪ್ಪದೇ ಸ್ಟಂಪ್ ಬಿದ್ದದ್ದು ವಿಶೇಷವಾಗಿತ್ತು.

ಇದನ್ನೂ ಓದಿ:

ಥರ್ಡ್ ಅಂಪೈರ್ ಪರಿಶೀಲನೆಯ ನಂತರ ಗ್ರೀನ್ ಔಟ್ ಎಂದು ಘೋಷಿಸಲಾಯಿತು. ಈ ಸ್ಟಂಪಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಇದನ್ನು ಕ್ರಿಕೆಟ್ ದಿಗ್ಗಜರಾದ ಗಿಲ್​​ಕ್ರಿಸ್ಟ್ ಹಾಗೂ ಧೋನಿ ಅವರ ಮಟ್ಟಕ್ಕೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ, ಜುರೆಲ್ ಅವರ ಮಿಂಚಿನ ವೇಗದ ಸ್ಟಂಪಿಂಗ್ ಪಂದ್ಯದಲ್ಲಷ್ಟೇ ಅಲ್ಲ, ಐಪಿಎಲ್ 2026ರ ನೆನಪಿನಲ್ಲಿ ಉಳಿಯುವ ಕ್ಷಣಗಳಲ್ಲಿ ಒಂದಾಗಿ ಪರಿಣಮಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !