October 8, 2026
Thursday, October 8, 2026
spot_img

ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಬಲವಂತವಾಗಿ ತಳ್ಳಿದರಾ ರಾಹುಲ್‌ ಗಾಂಧಿ? ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಿಇಸಿ ವಿರೋಧಿ ಪ್ರತಿಭಟನೆ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರನ್ನು ತಳ್ಳಿಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಸಾಕ್ಷ್ಯವೆನ್ನುವಂತೆ ವಿಡಿಯೋವೊಂದನ್ನು ಪೋಸ್ಟ್‌ ಮಾಡಲಾಗಿದೆ.

ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ ಅವರು ಘಟನೆಯ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ರೀಲ್ಸ್ ಮಾಡುವ ಉತ್ಸಾಹದಲ್ಲಿ ರಾಹುಲ್ ಗಾಂಧಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನ ತಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೇ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಿಡಿಯೋವೊಂದರಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಮೊಣಕೈಯಿಂದ ಗುದ್ದಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.

ಬಿಜೆಪಿ ಸೋಷಿಯಲ್‌ ಮೀಡಿಯಾ ಸಹ ಸಂಚಾಲಕ ಅರುಣ್ ಯಾದವ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ರಾಜಕೀಯ ಎಲ್ಲ ಮಿತಿಗಳನ್ನೂ ಮೀರಿದಾಗ: ಪ್ರಿಯಾಂಕಾ ಗಾಂಧಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರಿಗೆ ಮೊಣಕೈಯಿಂದ ಹೊಟ್ಟೆ ಭಾಗಕ್ಕೆ ಜೋರಾಗಿ ಗುದ್ದಿರುವುದು ಕಂಡುಬಂದಿದೆ. ಕಾಂಗ್ರೆಸ್ ಶಿಬಿರದಿಂದ ಕಂಡುಬಂದಿರುವ ಈ ದೃಶ್ಯಗಳು ನಾಚಿಕೆಗೇಡಿನವು ಎಂದು ಟೀಕಿಸಿದ್ದಾರೆ.

ಈ ವಿಡಿಯೋಗಳಿಗೆ ಜನರು ಕಮೆಂಟ್‌ ಮಾಡಿದ್ದು, ಆ ಸಮಯದಲ್ಲಿ ಯಾವ ನಾಯಕರು ಯಾರನ್ನು ಮುಟ್ಟಿದ್ದರೂ ಹೊಡೆದರು, ಗುದ್ದಿದರು ಎಂದು ಬಿಂಬಿಸುತ್ತೀರಿ ಎಂದು ರಾಗಾ ಪರ ಬ್ಯಾಟ್‌ ಬೀಸಿದ್ದಾರೆ. ಇನ್ನೂ ಹಲವರು ಇದು ಕೆಟ್ಟ ರಾಜಕೀಯದ ಲಕ್ಷಣ ನಮ್ಮ ಪೊಲೀಸ್‌ ಸಿಬ್ಬಂದಿಯನ್ನು ತಳ್ಳುವುದನ್ನು ಗಂಭೀರವಾಗಿ ಪರಿಗಣಿಸಿ ಎಂದಿದ್ದಾರೆ.

Must Read