April 19, 2026
Sunday, April 19, 2026
spot_img

Dinner Special | ರಾತ್ರಿಯ ಊಟಕ್ಕೆ ಬೆಸ್ಟ್ ಈ ಆಲೂಗಡ್ಡೆ ಸೂಪ್

ದಿನವಿಡೀ ಕೆಲಸದ ಬಳಿಕ ರಾತ್ರಿ ಹೊತ್ತಿಗೆ ಲೈಟ್ ಆಗಿ, ಹೊಟ್ಟೆಗೆ ಸುಲಭವಾಗಿ ಜೀರ್ಣವಾಗುವ ಹಾಗೆ, ಹಾಗೇ ರುಚಿಕರವಾಗಿರುವ ಊಟ ಬೇಕು ಅನ್ನಿಸ್ತದೆ ಅಲ್ವಾ? ಅಂತಹ ಸಮಯದಲ್ಲಿ ಈ ಆಲೂಗಡ್ಡೆ ಸೂಪ್ ಬೆಸ್ಟ್ ಆಯ್ಕೆ. ಇದು ಹೊಟ್ಟೆ ತುಂಬಿಸುವುದರ ಜೊತೆಗೆ ದೇಹಕ್ಕೆ ಹಿತವೂ ಕೊಡುತ್ತದೆ. ವಿಶೇಷವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಇದು ಲೈಟ್ ಡಿನ್ನರ್ ಆಗಿ ಸೂಪರ್.

ಬೇಕಾಗುವ ಪದಾರ್ಥಗಳು:

ಆಲೂಗಡ್ಡೆ – 2-3
ಬೆಣ್ಣೆ – 1-2 ಟೇಬಲ್ ಸ್ಪೂನ್
ಈರುಳ್ಳಿ – 1
ಬೆಳ್ಳುಳ್ಳಿ – 2-3 ಎಸಳು
ಹಾಲು – 1.5 ರಿಂದ 2 ಕಪ್
ತರಕಾರಿ ಸ್ಟಾಕ್ ಅಥವಾ ನೀರು – 1-2 ಕಪ್
ಉಪ್ಪು, ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ತಯಾರಿಸುವ ವಿಧಾನ:

ಪಾತ್ರೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮೃದುವಾಗುವವರೆಗೆ ಹುರಿಯಿರಿ.ಈಗ ಆಲೂಗಡ್ಡೆ ತುಂಡುಗಳನ್ನು ಸೇರಿಸಿ 2-3 ನಿಮಿಷ ಹುರಿದು, ನಂತರ ನೀರು/ಸ್ಟಾಕ್, ಉಪ್ಪು, ಮೆಣಸು ಸೇರಿಸಿ ಮುಚ್ಚಿ 10-12 ನಿಮಿಷ ಬೇಯಿಸಿ.

ಆಲೂಗಡ್ಡೆ ಬೆಂದ ನಂತರ, ಸ್ವಲ್ಪ ಮ್ಯಾಶ್ ಮಾಡಿ ಅಥವಾ ಮಿಕ್ಸಿಯಲ್ಲಿ ಸ್ವಲ್ಪ ಬ್ಲೆಂಡ್ ಮಾಡಿ. ಈಗ ಹಾಲು ಸೇರಿಸಿ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಬೇಕಾದರೆ ಸ್ವಲ್ಪ ಕ್ರೀಮ್ ಕೂಡ ಸೇರಿಸಬಹುದು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !