August 18, 2026
Tuesday, August 18, 2026
spot_img

ಹಸೆಮಣೆ ಏರೋಕೆ ಸಜ್ಜಾದ ʼಮಂಕಿಮ್ಯಾನ್‌ʼ ಜ್ಯೋತಿರಾಜ್‌, ವಧು ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೋಟೆಗಳನ್ನು, ಬೆಟ್ಟಗಳನ್ನು ಹಾಗೂ ಗುಂಡಿಗಳೇ ಇರಲಿ ಯಾವ ಸಹಾಯವೂ ಇಲ್ಲದೇ ಬರಿಗೈ ಬಳಸಿ ಏರಿ ಇಳಿಯುವ ಚಿತ್ರದುರ್ಗದ ಮಂಕಿಮ್ಯಾನ್‌ ಎಂದೇ ಖ್ಯಾತಿಯಾಗಿರುವ ಜ್ಯೋತಿರಾಜ್‌ ಅವರು ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ.

ಮೊದಲ ಮದುವೆ ಮುರಿದು ಬಿದ್ದಿತ್ತು

2019 ಜೋಗ ಜಲಪಾತಕ್ಕೆ ಇಳಿದ ಜ್ಯೋತಿರಾಜ್‌ ಕಾಣೆಯಾಗಿದ್ದಾರು. ಎಷ್ಟೋ ಸಮಯದವರೆಗೂ ಜ್ಯೋತಿರಾಜ್‌ ಬದುಕಿದ್ದಾರೋ ಇಲ್ಲವೋ ಎನ್ನುವ ಸುಳಿವೇ ಇರಲಿಲ್ಲ. ಜೋಗದಲ್ಲಿ ಕಾಣೆಯಾದವರನ್ನು ಹುಡುಕಲು ಹೋಗಿದ್ದ ಜ್ಯೋತಿರಾಜ್‌ಗೆ ಮದುವೆ ಫಿಕ್ಸ್‌ ಆಗಿತ್ತು. ಆದರೆ ಎಷ್ಟು ದಿನವಾದರೂ ಅವರು ಕಾಣಿಸದ ಕಾರಣ ಮದುವೆ ಮುರಿದುಬಿದ್ದಿತ್ತು. ಇದಾದ ಆರೇಳು ವರ್ಷಗಳ ನಂತರ ಜ್ಯೋತಿರಾಜ್‌ ಮದುವೆಯಾಗುತ್ತಿದ್ದಾರೆ.

ಎಲ್ಲರಿಗೂ ಮುಕ್ತ ಆಹ್ವಾನ

ಇದೇ ತಿಂಗಳ 23 ಹಾಗೂ 24ರಂದು ಚಿತ್ರದುರ್ಗದ ವೈಭವ ಗಾರ್ಡನ್ಸ್‌ನಲ್ಲಿ ನನ್ನ ಮದುವೆ ಇದೆ. ಕರ್ನಾಟಕದ ಜನತೆಗೆ ಮುಕ್ತ ಆಹ್ವಾನ ನೀಡುತ್ತೇನೆ. ಎಲ್ಲರೂ ನನ್ನ ಮದುವೆಗೆ ಬಂದು ಹಾರೈಸಿ ಎಂದು ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ನಿವಾಸಿ ನಿವೇದಿತಾ ಅವರನ್ನು ಜ್ಯೋತಿರಾಜ್‌ ಮದುವೆಯಾಗಲಿದ್ದಾರೆ. ಜ್ಯೋತಿರಾಜ್‌ ಸಾಹಸವನ್ನು ನೋಡಿ ನನಗೆ ಭಯವಾಗಿಲ್ಲ. ಸಿಕ್ಕಾಪಟ್ಟೆ ಖುಷಿ ಇದೆ. ಅವರ ಸಾಹಸೀಮಯ ಪ್ರವೃತ್ತಿಯನ್ನು ನೋಡಿಯೇ ಇಷ್ಟಪಟ್ಟಿದ್ದೇನೆ ಎಂದು ಭಾವೀ ಪತ್ನಿ ನಿವೇದಿತಾ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !