October 15, 2026
Thursday, October 15, 2026
spot_img

ಕೆಲಸವನ್ನೇ ಲೈಫ್‌ ಅಂದ್ಕೊಂಡಿದ್ದೆ, ಒಂದ್‌ ದಿನ ಇದ್ದಕ್ಕಿದ್ದಂತೆ ಕಿತ್ತು ಬಿಸಾಕಿದ್ರು: ಮಹಿಳೆಯ ಪೋಸ್ಟ್ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಎಕ್ಸ್‌ ಎಂಪ್ಲಾಯಿ ನಿಧಿ ಎನ್ನುವವರು ತಮ್ಮ ಕೆಲಸ ಕಳೆದುಹೋದ ಬಗ್ಗೆ ಪೋಸ್ಟ್‌ ಮಾಡಿದ್ದು, ಇದು ಎಲ್ಲೆಡೆ ವೈರಲ್‌ ಆಗಿದೆ.

ಎಷ್ಟೇ ಪ್ರೆಶರ್‌ ಆದರೂ, ಒತ್ತಡ ಬಂದರೂ ಕೆಲಸವನ್ನೇ ನನ್ನ ಜಗತ್ತು ಎಂದುಕೊಂಡು ವೃತ್ತಿಯನ್ನು ಅಪ್ಪಿದ್ದೆ. ಆದರೆ ಒಂದೇ ಕ್ಷಣಕ್ಕೆ ನಾನ್ಯಾರು ಅಲ್ಲ ಎನ್ನುವಂತೆ ನನ್ನನ್ನು ಕೆಲಸದಿಂದ ಕಿತ್ತು ಹಾಕಿದ್ರು ಎಂದು ನಿಧಿ ಅಳಲು ತೋಡಿಕೊಂಡಿದ್ದಾರೆ.

ನನ್ನ ಕೆಲಸ ನನ್ನ ಪಾಲಿಗೆ ಎಲ್ಲಾನೂ ಕೆಲಸ ಬಿಟ್ರೆ ಬೇರೆ ಐಡೆಂಟಿಟಿ ಇಷ್ಟವಿಲ್ಲ. ಆದರೆ ಒಂದೇ ಕ್ಷಣದಲ್ಲಿ ಕನಸೆಲ್ಲ ನುಚ್ಚು ನೂರಾಯ್ತು. ಇದು ನನಗೆ ವೇಕ್‌ಅಪ್‌ ಕಾಲ್‌ ಇದ್ದಂತೆ. ಕೆಲಸವೇ ಎಲ್ಲ ಅಲ್ಲ ಎಂದು ಲೈಫ್‌ ನನಗೆ ಹೇಳಿಕೊಟ್ಟಿದೆ ಎಂದಿದ್ದಾರೆ.

ಕೆಲಸ ಅಂದ್ರೆ ತುಂಬಾ ಇಷ್ಟ ಆಗ್ತಿತ್ತು. ಅವರಾಗೆ ರಜ ತಗೊಳಿ ಅಂದಾಗ ಮಾತ್ರ ತಗೋತಿದ್ದೆ. ಫ್ಯಾಮಿಲಿ, ಫ್ರೆಂಡ್ಸ್‌ ಹಾಗೆ ಸೋಶಿಯಲ್‌ ಲೈಫ್‌ ಮರೆತುಹೋಗಿದೆ. ನನ್ನ ದೇಹ ಹಾಗೂ ಮೆಂಟಲ್‌ ಬಗ್ಗೆ ಒಂದಿಷ್ಟೂ ಕಾಳಜಿ ಮಾಡಿಲ್ಲ. ಸರಿಯಾದ ಸಮಯಕ್ಕೆ ತಿಂದಿದ್ದು ನೆನಪೇ ಇಲ್ಲ. ಡೆಡ್‌ಲೈನ್‌ ಅಂದ್ರೆ ಒಂಥರಾ ಎಕ್ಸೈಟ್‌ಮೆಂಟ್‌. ಕೆಲಸ, ಮನೆ, ಕೆಲಸ ಮನೆ ಇಷ್ಟೇ ನನ್ನ ಲೈಫ್‌ ಆಗಿತ್ತು ಎಂದಿದ್ದಾರೆ.

ಈ ರೀತಿ ಜೀವನ ಮಾಡ್ತಿರೋದು ನಾನೊಬ್ಬಳೇ ಅಲ್ಲ. ಬೇಕಾದಷ್ಟು ಜನ ನನ್ನ ಮಾತನ್ನು ಅರ್ಥ ಮಾಡ್ಕೋತಾರೆ. ಕೆಲಸ ಬೇಕೇ ಬೇಕು ಆದರೆ ವರ್ಕ್‌ ಹಾಗೂ ಜೀವನವನ್ನು ಬ್ಯಾಲೆನ್ಸ್‌ ಮಾಡೋದು ಕಲೀರಿ ಎಂದು ನಿಧಿ ಹೇಳಿದ್ದಾರೆ.

Must Read