July 12, 2026
Sunday, July 12, 2026
spot_img

ನಿಲ್ಲಿಸಿದ ಟ್ರಕ್‌ಗೆ ನಿದ್ದೆಗಣ್ಣಿನಲ್ಲಿ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ: ಇಬ್ಬರು ಸಾ*ವು, ನೂರಾರು ಕೋಳಿಗಳ ಮಾರಣಹೋಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ನಿದ್ದೆಗಣ್ಣಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಶಿವಮೊಗ್ಗದ ವಾಸಿಂ ಹಾಗೂ ಮುಬಾರಕ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಗೂಡ್ಸ್‌ ವಾಹನದ ಚಾಲಕ ಬಸವರಾಜ ಈರಪ್ಪ ಹಂಚಿನಮನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲ್ಲಾಪುರದಿಂದ ಶಿವಮೊಗ್ಗದ ಸೊರಬಕ್ಕೆ ಕೋಳಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಅಪಘಾತದಲ್ಲಿ ನೂರಾರು ಕೋಳಿಗಳ ಮಾರಣಹೋಮವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !