October 9, 2026
Friday, October 9, 2026
spot_img

‘EDಗೆ ದೂರು ಕೊಟ್ಟಿದ್ಯಾರು ಅಂತ ಗೊತ್ತು’: ಸಿಎಂಗೆ ಮಾಹಿತಿ ನೀಡಿದ್ದೇನೆ ಎಂದ ಸತೀಶ್ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನ್ನ ವಿರುದ್ಧ EDಗೆ ದೂರು ಕೊಟ್ಟಿದು ಯಾರು ಅನ್ನೋದು ನನಗೆ ಗೊತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವ್ರಿಗೆ ಮಾಹಿತಿ ನೀಡಿದ್ದೇನೆ. ಹಾಗೆಯೇ ಈವಿಚಾರದ ಬಗ್ಗೆ ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಿರಲಿ ಆರೋಪ ಮಾಡಲು ಹಾಗೂ ತನಿಖಾ ಸಂಸ್ಥೆಗಳಿಗೆ ದೂರು ನೀಡಲು ಹಕ್ಕು ಹೊಂದಿದ್ದಾರೆ. ದೂರು ನೀಡಿದ ವ್ಯಕ್ತಿ ಕಾಂಗ್ರೆಸ್‌ನವರೇ ಅಥವಾ ಬೇರೆ ಪಕ್ಷಕ್ಕೆ ಸೇರಿದವರೇ ಎಂಬುದು ತಮಗೆ ಖಚಿತವಾಗಿ ತಿಳಿದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಪರಿಶೀಲಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:

ದೂರು ಕೊಟ್ಟಿರುವವರಿಗೆ ಕಾಂಗ್ರೆಸ್‌ನೊಂದಿಗೆ ಸಂಪರ್ಕವಿರಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಅವರು ಬಿಜೆಪಿ ಬೆಂಬಲಿಗರಾಗಿರುವ ಮಾಹಿತಿ ಇದೆ. ಹೀಗಾಗಿ ಈ ವಿಚಾರದಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.

ಜಾರಕಿಹೊಳಿ ಹಾಗೂ ಕುಟುಂಬಸ್ಥರ ಮೇಲೆ ದಾಳಿ

ಇತ್ತೀಚೆಗೆ ಜಾರಕಿಹೊಳಿ, ಅವರ ಕುಟುಂಬ ಸದಸ್ಯರು ಹಾಗೂ ಇತರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ FEMA ಅಡಿಯಲ್ಲಿ ED ಶೋಧ ನಡೆಸಿತ್ತು. ಈ ವೇಳೆ 3.45 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಹಾಗೂ ಕುಟುಂಬದ ವಿದೇಶಿ ಹೂಡಿಕೆಗಳು ಮತ್ತು ಗಡಿಯಾಚೆಗಿನ ವ್ಯಾಪಾರ ಸಂಪರ್ಕಗಳ ಕುರಿತು ಮಾಹಿತಿ ಪತ್ತೆಯಾಗಿದೆ ಎಂದು ED ತಿಳಿಸಿತ್ತು.

ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿರುವ ಜಾರಕಿಹೊಳಿ, ತಾವು ಯಾವುದೇ ಅಕ್ರಮ ವಿದೇಶಿ ಹೂಡಿಕೆ ಮಾಡಿಲ್ಲ, ED ತನಿಖೆಯನ್ನು ಕಾನೂನುಬದ್ಧವಾಗಿ ಎದುರಿಸುವುದಾಗಿ ತಿಳಿಸಿದ್ದಾರೆ.

Must Read