ಸಂಜೆ ಹೊತ್ತಿಗೆ ಏನಾದ್ರೂ ಚಟಾಕಿ, ಕ್ರಿಸ್ಪಿ ಸ್ನ್ಯಾಕ್ ತಿನ್ನೋ ಆಸೆ ಆಗ್ತಾ ಇದೆಯಾ? ಹಾಗಿದ್ರೆ ಹೊರಗೆ ಹೋಗೋ ಅವಶ್ಯಕತೆ ಇಲ್ಲ! ಮನೆಯಲ್ಲೇ ಸುಲಭವಾಗಿ “ಕ್ರಿಸ್ಪಿ ಮೊಮೊಸ್” ಮಾಡಿ ಸವಿಯಬಹುದು.
ಬೇಕಾಗುವ ಪದಾರ್ಥಗಳು:
ಫಿಲ್ಲಿಂಗ್‌ಗೆ:
ಎಣ್ಣೆ – 1 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 1-2
ಈರುಳ್ಳಿ – 1
ತರಕಾರಿಗಳು (ಕ್ಯಾರೆಟ್, ಕೋಸು, ಕ್ಯಾಪ್ಸಿಕಂ) ಅಥವಾ ಚಿಕನ್
ಉಪ್ಪು, ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಮೊಮೊಸ್ ಹಿಟ್ಟಿಗೆ:
ಮೈದಾ – 1 ಕಪ್
ನೀರು – ಅಗತ್ಯವಿದ್ದಷ್ಟು
ಕೋಟಿಂಗ್‌ಗೆ:
ಜೋಳದ ಹಿಟ್ಟು (Cornflour) – 2 ಚಮಚ
ನೀರು – ಮಿಶ್ರಣಕ್ಕೆ
ಕಾರ್ನ್‌ಫ್ಲೇಕ್ಸ್ ಅಥವಾ ಪೋಹಾ – ಪುಡಿ ಮಾಡಿದ್ದು
ತಯಾರಿಸುವ ವಿಧಾನ:
ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಈರುಳ್ಳಿ ಮತ್ತು ತರಕಾರಿಗಳು/ಚಿಕನ್ ಸೇರಿಸಿ ಚೆನ್ನಾಗಿ ಬೇಯಿಸಿ. ಕೊನೆಯಲ್ಲಿ ಉಪ್ಪು, ಮೆಣಸಿನ ಪುಡಿ ಸೇರಿಸಿ ಮಿಶ್ರಣ ತಯಾರಿಸಿ.
ಈಗ ಮೈದಾ ಹಿಟ್ಟನ್ನು ಮೃದುವಾಗಿ ಕಲಸಿ ಸಣ್ಣ ಉಂಡೆಗಳಾಗಿ ಮಾಡಿ, ಚಪಾತಿ ತರ ಲಟ್ಟಿಸಿ. ಮಧ್ಯದಲ್ಲಿ ಫಿಲ್ಲಿಂಗ್ ಹಾಕಿ ಮೊಮೊಸ್ ಆಕಾರಕ್ಕೆ ಮಡಚಿ. ಇದನ್ನು ಆವಿಯಲ್ಲಿ 5-7 ನಿಮಿಷ ಬೇಯಿಸಿ.
ಜೋಳದ ಹಿಟ್ಟು ಮತ್ತು ನೀರಿನಿಂದ ದಪ್ಪದ ಮಿಶ್ರಣ ತಯಾರಿಸಿ. ಬೇಯಿಸಿದ ಮೊಮೊಸ್‌ಗಳನ್ನು ಮೊದಲು ಈ ಮಿಶ್ರಣದಲ್ಲಿ ಅದ್ದಿ, ನಂತರ ಕಾರ್ನ್‌ಫ್ಲೇಕ್ಸ್/ಪೋಹಾ ಪುಡಿಯಲ್ಲಿ ಚೆನ್ನಾಗಿ ಹೊರಳಿಸಿ.
ಕಾದ ಎಣ್ಣೆಯಲ್ಲಿ ಮೊಮೊಸ್ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.



