October 11, 2026
Sunday, October 11, 2026
spot_img

ಪಹಲ್ಗಾಮ್‌ ಅಟ್ಯಾಕ್‌ಗೆ 1 ವರ್ಷ| ಕೆಲವು ಗಡಿಗಳನ್ನು ಎಂದಿಗೂ ದಾಟಬಾರದು: ಭಾರತೀಯ ಸೇನೆಯ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಲವು ಗಡಿಗಳನ್ನು ಎಂದಿಗೂ ದಾಟಬಾರದು, ದಾಟಿದ್ದೇ ಆದರೆ ಪರಿಣಾಮ ಹುಟ್ಟಡಗಿಸುವಂತಿರುತ್ತದೆ ಎಂದು ಭಾರತೀಯ ಸೇನೆ ಪೋಸ್ಟ್‌ ಮಾಡಿದೆ. ಪಹಲ್ಗಾಮ್‌ ದಾಳಿಯಲ್ಲಿ ಪ್ರಾಣಕಳೆದುಕೊಂಡ ಮುಗ್ಧ ಜೀವಗಳಿಗೆ ಸಂತಾಪ ಸೂಚಿಸಿ, ನಮ್ಮ ದೇಶದ ಜತೆ ಯಾರೂ ಆಟ ಆಡುವಂತಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ಇದಾಗಿದ್ದು, ಕೆಲವು ಗಡಿಗಳನ್ನು ಯಾರೂ ದಾಟಬಾರದು, ದಾಟಿದ್ದೇ ಆದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಭಾರತೀಯ ಸೇನೆ ಈಗಾಗಲೇ ಪಾಕ್‌ನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ಮುಗ್ಧ ಜೀವಗಳ ಸಾವಿಗೆ ಪ್ರತೀಕಾರ ತೀರಿಸಿಕೊಂಡಿದೆ. ನರಮೇಧಕ್ಕೆ ತಕ್ಕ ಉತ್ತರ ನೀಡಿ ಆಗಿದೆ. ನಮ್ಮವರ ಜೀವ ತೆಗೆದವರನ್ನು ಹುಟ್ಟಡಗಿಸಿ ಸದೆಬಡಿದಾಗಿದೆ. ಭಾರತ ಸದಾ ಒಗ್ಗಟ್ಟಿನಲ್ಲಿದೆ. ಯಾವ ಇತರ ಶಕ್ತಿಯ ಆಟಕ್ಕೆ ಇಲ್ಲಿ ಪ್ರವೇಶವಿಲ್ಲ ಎಂದು ಬಲವಾದ ಸಂದೇಶವನ್ನು ನೀಡಿದೆ.

Must Read