ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಸೀಸನ್ ಈಗ ರೋಚಕ ಹಂತಕ್ಕೆ ತಲುಪಿದೆ. ಏಪ್ರಿಲ್ 24ರಂದು ನಡೆಯಲಿರುವ 34ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಆವೃತ್ತಿಯಲ್ಲಿ ಉಭಯ ತಂಡಗಳು ಪರಸ್ಪರ ಮೊದಲ ಬಾರಿಗೆ ಸೆಣಸಾಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಬೆಂಗಳೂರಿನ ಅಭಿಮಾನಿಗಳಿಗೆ ನಾಳಿನ ಪಂದ್ಯ ಅತ್ಯಂತ ಭಾವನಾತ್ಮಕವಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್ಸಿಬಿ ಎರಡು ತವರು ಮೈದಾನಗಳನ್ನು ಆಯ್ಕೆ ಮಾಡಿಕೊಂಡಿದೆ. ಇದರ ಅನ್ವಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳು ಹಾಗೂ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 2 ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ನಡೆಯಲಿರುವ ಈ ಸೀಸನ್‌ನ ಕೊನೆಯ ಲೀಗ್ ಪಂದ್ಯ ಇದಾಗಿದ್ದು, ಮೈದಾನದಲ್ಲಿ ‘ಆರ್ಸಿಬಿ… ಆರ್ಸಿಬಿ…’ ಘೋಷಣೆ ಮೊಳಗಲಿದೆ.
ಪಂದ್ಯದ ಸಮಯ ಮತ್ತು ನೇರಪ್ರಸಾರ:
ದಿನಾಂಕ: ಏಪ್ರಿಲ್ 24, 2026 (ಶುಕ್ರವಾರ)
ಸ್ಥಳ: ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಸಮಯ: ಸಂಜೆ 7:30ಕ್ಕೆ ಪಂದ್ಯ ಆರಂಭ (ಟಾಸ್ ಪ್ರಕ್ರಿಯೆ ಸಂಜೆ 7:00ಕ್ಕೆ).
ನೇರಪ್ರಸಾರ ಎಲ್ಲಿ?
ಟಿವಿಯಲ್ಲಿ ವೀಕ್ಷಿಸಲು ‘ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್’ ಚಾನೆಲ್ ಲಭ್ಯವಿದೆ. ಮೊಬೈಲ್ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಲು ‘ಜಿಯೋ ಹಾಟ್ ಸ್ಟಾರ್’ ಆಪ್ ಮೂಲಕ ನೇರಪ್ರಸಾರವನ್ನು ಆನಂದಿಸಬಹುದು.



