April 24, 2026
Friday, April 24, 2026
spot_img

FOOD | ಉಡುಪಿ ಸ್ಟೈಲ್ ಆಲೂಗೆಡ್ಡೆ ಸಾಂಬಾರ್: ಮಾಡೋದು ತುಂಬಾನೇ ಸಿಂಪಲ್

ಉಡುಪಿ ಶೈಲಿಯ ಅಡುಗೆ ಎಂದರೆ ಸರಳತೆ ಮತ್ತು ರುಚಿಯ ಅದ್ಭುತ ಸಂಯೋಜನೆ. ಅದರಲ್ಲಿ ಆಲೂಗೆಡ್ಡೆ ಸಾಂಬಾರ್ ಒಂದು ವಿಶೇಷ ಸ್ಥಾನ ಹೊಂದಿದೆ. ಅನ್ನ, ಇಡ್ಲಿ ಅಥವಾ ದೋಸೆಯ ಜೊತೆ ಈ ಸಾಂಬಾರ್ ಸವಿದರೆ ಮನೆಯ ಊಟದ ಸೊಗಡು ನೆನಪಾಗುತ್ತೆ ಖಂಡಿತ.

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – 2 (ಮಧ್ಯಮ ಗಾತ್ರ)
ತೊಗರಿಬೇಳೆ – 1/2 ಕಪ್
ಈರುಳ್ಳಿ – 1
ಹುಣಸೆಹಣ್ಣಿನ ರಸ – ಸ್ವಲ್ಪ
ಸಾಂಬಾರ್ ಪುಡಿ – 1-2 ಚಮಚ
ಬೆಲ್ಲ – ಚಿಕ್ಕ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – ಕೆಲವು ಎಲೆಗಳು

ಮಸಾಲೆಗಾಗಿ:

ಕಾಯಿತುರಿ – 2 ಚಮಚ
ಒಣಮೆಣಸಿನಕಾಯಿ – 2
ಕೊತ್ತಂಬರಿ ಬೀಜ – 1 ಚಮಚ
ಜೀರಿಗೆ – 1/2 ಚಮಚ

ಒಗ್ಗರಣೆಗೆ:

ಎಣ್ಣೆ – 2 ಚಮಚ
ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಕರಿಬೇವು

ಮಾಡುವ ವಿಧಾನ:

ಮೊದಲು ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ. ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಕತ್ತರಿಸಿ ಬೇಯಿಸಿಕೊಳ್ಳಿ. ಈಗ ಬೇಳೆ, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಂದೇ ಪಾತ್ರೆಯಲ್ಲಿ ಸೇರಿಸಿ. ಮಸಾಲೆಗಾಗಿ ತೆಗೆದುಕೊಂಡ ಪದಾರ್ಥಗಳನ್ನು ಹುರಿದು ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಳೆ-ಆಲೂಗಡ್ಡೆಗೆ ಸೇರಿಸಿ.

ಅದಕ್ಕೆ ಹುಣಸೆಹಣ್ಣಿನ ರಸ, ಉಪ್ಪು, ಬೆಲ್ಲ ಮತ್ತು ಕರಿಬೇವು ಹಾಕಿ 5-10 ನಿಮಿಷ ಚೆನ್ನಾಗಿ ಕುದಿಸಬೇಕು.
ಕೊನೆಯಲ್ಲಿ ಒಗ್ಗರಣೆ ಮಾಡಿ ಸಾಂಬಾರ್‌ಗೆ ಸೇರಿಸಿ.

ಬಿಸಿ ಬಿಸಿ ಸಾಂಬಾರ್ ಅನ್ನದ ಜೊತೆ ಸವಿಯೋದಕ್ಕೆ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !