ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಳ ಹಿಂದೆ ರಾಜ್ಯದಲ್ಲಿದ್ದ ಜನಿವಾರ ದಂಗಲ್ ಇದೀಗ ಮತ್ತೆ ಆರಂಭವಾಗಿದೆ. ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಬೆಂಗಳೂರು ಕಾಲೇಜಿನ ಸಿಬ್ಬಂದಿ ತೆಗೆಸಿದ್ದು, ಪೋಷಕರು ದೂರು ದಾಖಲಿಸಿದ್ದಾರೆ.
ಮಡಿವಾಳದ ಕೃಪಾನಿಧಿ ಪರೀಕ್ಷಾ ಕೇಂದ್ರದಲ್ಲಿ ಆನಂದ್ ಸುಧೀರ್ ರಾವ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿ ಪರೀಕ್ಷೆ ಬರೆಯೋದಕ್ಕೆ ಕೂರಿಸಿದ್ದಾರೆ. ಮೊದಲು ಜನಿವಾರ ತೆಗೆಯೋದಕ್ಕೆ ಇಲ್ಲ ಎಂದ ವಿದ್ಯಾರ್ಥಿಗೆ ಸಿಬ್ಬಂದಿ ಮನೆಗೆ ಹೋಗಿ ಎಂದು ಹೇಳಿದ್ದಾರೆ.
ಪೋಷಕರು ಮಗನ ಭವಿಷ್ಯ ಮುಖ್ಯ ಎಂದು ನಿರ್ಧರಿಸಿ ಒಲ್ಲದ ಮನಸ್ಸಿನಿಂದಲೇ ಜನಿವಾರ ತೆಗೆಯಲು ಹೇಳಿದ್ದಾರೆ. ಈ ವಿಷಯವಾಗಿ ಸಿಬ್ಬಂದಿ ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ತಹಸೀಲ್ದಾರ್, ಶಿಕ್ಷಣಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಸುಧೀರ್ ರಾವ್ ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಎಲ್ಲಿಯೂ ಹೇಳಬೇಡಿ ಎಂದು ಲೆಟರ್ ಕೂಡ ಬರಿಸಿಕೊಂಡಿದ್ದಾರೆ.
ಇದೀಗ ಪೋಷಕರು ಈ ಬಗ್ಗೆ ದೂರು ನೀಡಿದ್ದಾರೆ.



