April 24, 2026
Friday, April 24, 2026
spot_img

Fact | ಬೇಸಿಗೆಗೆ ಕಬ್ಬಿನ ಹಾಲು ಬೆಸ್ಟ್ ನಿಜ, ಆದರೆ ಯಾರಿಗೆ ಇದು ಶತ್ರು ಗೊತ್ತೇ?

ಬೇಸಿಗೆಯ ಬಿಸಿಲಿನಿಂದ ತತ್ತರಿಸುವ ಜನರಿಗೆ ಕಬ್ಬಿನ ಹಾಲು ಒಂದು ಅತ್ಯುತ್ತಮ ಎನರ್ಜಿ ಡ್ರಿಂಕ್. ಇದರಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೇರಳವಾಗಿದೆ. ಆದರೆ, ನೈಸರ್ಗಿಕ ಪಾನೀಯ ಎಂಬ ಕಾರಣಕ್ಕೆ ಎಲ್ಲರೂ ಇದನ್ನು ಕುಡಿಯುವುದು ಸರಿಯಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿದ್ದಾಗ ಕಬ್ಬಿನ ಹಾಲು ಸೇವಿಸುವುದು ನಿಮ್ಮ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು.

ಯಾವ ಸಮಸ್ಯೆ ಇದ್ದಾಗ ಕಬ್ಬಿನ ಜ್ಯೂಸ್ ಕುಡಿಯಬಾರದು?

ಕಬ್ಬಿನ ಹಾಲಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಅತಿ ಹೆಚ್ಚಾಗಿರುತ್ತದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿರುವುದರಿಂದ, ಮಧುಮೇಹಿಗಳು ಇದನ್ನು ಕುಡಿದ ತಕ್ಷಣ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ತನೆ ಏರಿಕೆಯಾಗಬಹುದು.

ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಕಬ್ಬಿನ ಹಾಲಿನಿಂದ ದೂರವಿರುವುದು ಒಳಿತು. ಇದರಲ್ಲಿ ಕ್ಯಾಲೋರಿಗಳು ಹೆಚ್ಚಿರುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಕಬ್ಬಿನ ಹಾಲಿನಲ್ಲಿ ‘ಪೋಲಿಕೋಸಾನಾಲ್’ ಎಂಬ ಅಂಶವಿರುತ್ತದೆ. ಅತಿಯಾದ ಸೇವನೆಯಿಂದ ಹೊಟ್ಟೆ ನೋವು, ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕಬ್ಬಿನ ಹಾಲು ತಂಪು ಪ್ರಕೃತಿಯನ್ನು ಹೊಂದಿದೆ. ನಿಮಗೆ ಈಗಾಗಲೇ ಕಫ ಅಥವಾ ಸೈನಸ್ ಸಮಸ್ಯೆ ಇದ್ದರೆ, ಇದನ್ನು ಸೇವಿಸುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಬಹುದು.

ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಔಷಧಿಗಳನ್ನು ತೆಗೆದುಕೊಳ್ಳುವವರು ಕಬ್ಬಿನ ಹಾಲನ್ನು ತಪ್ಪಿಸಬೇಕು, ಏಕೆಂದರೆ ಇದು ರಕ್ತವನ್ನು ತೆಳುಗೊಳಿಸುವ ಗುಣವನ್ನು ಹೊಂದಿರಬಹುದು.

ನೀವು ಕಬ್ಬಿನ ಹಾಲು ಕುಡಿಯುವುದಾದರೆ ಯಾವಾಗಲೂ ತಾಜಾ ಜ್ಯೂಸ್ ಅನ್ನೇ ಕುಡಿಯಿರಿ. ದೀರ್ಘಕಾಲದವರೆಗೆ ಇಟ್ಟಿರುವ ಜ್ಯೂಸ್‌ನಲ್ಲಿ ಬ್ಯಾಕ್ಟೀರಿಯಾಗಳು ಬೇಗನೆ ಉತ್ಪತ್ತಿಯಾಗುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !