April 24, 2026
Friday, April 24, 2026
spot_img

IPL | ಸಾಯಿ ಸುದರ್ಶನ್ ಅಬ್ಬರದ ಶತಕ: ಕ್ರಿಸ್ ಗೇಲ್ ದಾಖಲೆ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ಆರ್​​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ ಮೂರನೇ ಐಪಿಎಲ್ ಶತಕ ಪೂರೈಸಿದ ಸುದರ್ಶನ್, ವಿಶ್ವದ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಅವರ ದಶಕದ ಹಳೆಯ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಸಾಯಿ ಸುದರ್ಶನ್ ಪಾಲಿಗೆ ಐಪಿಎಲ್‌ನ ಕಳೆದ ಮೂರು ಸೀಸನ್‌ಗಳು ಅತ್ಯಂತ ಯಶಸ್ವಿಯಾಗಿವೆ. 2024ರಲ್ಲಿ ಚೊಚ್ಚಲ ಶತಕ ಬಾರಿಸಿದ್ದ ಅವರು, 2025ರಲ್ಲೂ ಶತಕದ ಸಂಭ್ರಮ ಆಚರಿಸಿದ್ದರು. ಇದೀಗ 2026ರ ಆವೃತ್ತಿಯಲ್ಲಿ ಬೆಂಗಳೂರಿನ ನೆಲದಲ್ಲಿ ಅಬ್ಬರಿಸುವ ಮೂಲಕ ಸತತ ಮೂರು ಸೀಸನ್​​ಗಳಲ್ಲಿ ಶತಕ ಬಾರಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. ಅಂತಿಮವಾಗಿ 58 ಎಸೆತಗಳಲ್ಲಿ 100 ರನ್ ಗಳಿಸಿದ ಇವರು ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.

ಈ ಇನಿಂಗ್ಸ್ ಮೂಲಕ ಸುದರ್ಶನ್ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ 48 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಸುದರ್ಶನ್ ಕೇವಲ 47 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !