April 24, 2026
Friday, April 24, 2026
spot_img

ಧ್ರುವ ಸರ್ಜಾ ಅಭಿಮಾನಿಗಳಿಗೆ ಶಾಕ್: ಯೂಟ್ಯೂಬ್‌ನಿಂದ ‘ಕೆಡಿ’ ಟ್ರೇಲರ್ ನಾಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಕೆಡಿ: ದಿ ಡೆವಿಲ್’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಚಿತ್ರತಂಡಕ್ಕೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದ ಈ ಚಿತ್ರದ ಟ್ರೇಲರ್ ಈಗ ಯೂಟ್ಯೂಬ್‌ನಿಂದ ಕಣ್ಮರೆಯಾಗಿದೆ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗೆ ಸಾಲು ಸಾಲು ಅಡೆತಡೆಗಳು ಎದುರಾಗುತ್ತಿವೆಯೇ ಎಂಬ ಚರ್ಚೆ ಶುರುವಾಗಿದೆ.

ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಅನಾವರಣಗೊಂಡಿದ್ದ ಟ್ರೇಲರ್ ಕುರಿತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಈಗ ತಾಂತ್ರಿಕ ಕಾರಣಗಳಿಂದಾಗಿ ಟ್ರೇಲರ್ ಅನ್ನು ‘ಪ್ರೈವೇಟ್’ ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಣ ಸಂಸ್ಥೆ, “ಟ್ರೇಲರ್‌ನಲ್ಲಿ ಪ್ರಮಾಣೀಕರಣ ಪ್ರಕ್ರಿಯೆಯ ಸಮಯದಲ್ಲಿ ಅಚಾತುರ್ಯದಿಂದ ಕೆಲವು ಅಪ್ರಮಾಣಿತ ಅಂಶಗಳು ಸೇರ್ಪಡೆಯಾಗಿದ್ದವು. ಹೀಗಾಗಿ ಮಾರ್ಗಸೂಚಿಗಳ ಅನ್ವಯ ಪರಿಷ್ಕರಿಸಿದ ಟ್ರೇಲರ್ ಅನ್ನು ಶೀಘ್ರದಲ್ಲೇ ಮರು ಅಪ್‌ಲೋಡ್ ಮಾಡಲಾಗುವುದು” ಎಂದು ತಿಳಿಸಿದೆ.

ಒಂದೆಡೆ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ..’ ಹಾಡು ವಿವಾದಕ್ಕೆ ಗುರಿಯಾಗಿ ಡಿಲೀಟ್ ಆಗಿದ್ದರೆ, ಮತ್ತೊಂದೆಡೆ ಸೆನ್ಸಾರ್ ಮಂಡಳಿಯ ನಿಯಮಗಳ ಬಗ್ಗೆ ನಿರ್ದೇಶಕ ಪ್ರೇಮ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ‘ಕೆಡಿ’ ಟ್ರೇಲರ್ ಕೂಡ ಡಿಲೀಟ್ ಆಗಿರುವುದು ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸೆನ್ಸಾರ್ ನಿಯಮಗಳಿಗೆ ಬದ್ಧವಾಗಿ ಶೀಘ್ರದಲ್ಲೇ ಹೊಸ ಟ್ರೇಲರ್ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಅಭಿಮಾನಿಗಳು ಈಗ ಪರಿಷ್ಕೃತ ಆವೃತ್ತಿಗಾಗಿ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !