August 26, 2026
Wednesday, August 26, 2026
spot_img

ತಿಮ್ಮಪ್ಪನ ಭಕ್ತರೇ ನೋ ಟೆನ್ಶನ್: ನಿಮಗೂ ಸಿಗುತ್ತೆ ವೆಂಕಟೇಶ್ವರ ಸ್ವಾಮಿಯ ದರುಶನ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರುಶನಕ್ಕಾಗಿ ವಿಶೇಷ ಪ್ರವೇಶ ಟಿಕೆಟ್ ಪಡೆಯಲು ಕಷ್ಟಪಡುತ್ತಿದ್ದ ಭಕ್ತರಿಗೆ ಟಿಟಿಡಿ ಹೊಸ ಮಾರ್ಗವೊಂದನ್ನು ಪರಿಚಯಿಸಿದೆ. ‘ಶ್ರೀನಿವಾಸ ದಿವ್ಯಾನುಗ್ರಹ ವಿಶೇಷ ಹೋಮ’ದಲ್ಲಿ ಭಾಗವಹಿಸುವ ಭಕ್ತರಿಗೆ ವಿಶೇಷ ದರ್ಶನದ ಅವಕಾಶ ಕಲ್ಪಿಸಲಾಗಿದೆ.

ಈ ಹೋಮದ ಟಿಕೆಟ್ ದರ 1,600 ರೂ. ಆಗಿದ್ದು, ಇಬ್ಬರು ಭಕ್ತರು ಪಾಲ್ಗೊಳ್ಳಬಹುದು. ಹೋಮ ಪೂರ್ಣಗೊಂಡ ಬಳಿಕ ಅದೇ ದಿನ ಮಧ್ಯಾಹ್ನ ವಿಶೇಷ ಪ್ರವೇಶದ ಮೂಲಕ ಶ್ರೀವಾರಿಯ ದರುಶನಕ್ಕೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ:

300 ರೂ.ಗಳ ವಿಶೇಷ ಪ್ರವೇಶ ದರುಶನದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಖಾಲಿಯಾಗುತ್ತಿರುವ ಹಿನ್ನೆಲೆ, ಇದು ಭಕ್ತರಿಗೆ ಅನುಕೂಲಕರ ಆಯ್ಕೆಯಾಗಿ ಪರಿಣಮಿಸಿದೆ. ಇದೇ ವೇಳೆ ತಿರುಮಲದಲ್ಲಿ ನಡೆಯುತ್ತಿರುವ ಉತ್ಸವಗಳ ಕಾರಣ ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದ್ದು, ದರುಶನ ವ್ಯವಸ್ಥೆ ಸುಗಮವಾಗಲು ದೇವಸ್ಥಾನ ಆಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !