October 9, 2026
Friday, October 9, 2026
spot_img

ಪಲ್ಯ, ಗ್ರೇವಿ & More 71 | ಬೆಳ್ಳುಳ್ಳಿ-ಕೊತ್ತಂಬರಿ ಸೊಪ್ಪಿನ ಚಟ್ನಿ: ಊಟ, ತಿಂಡಿಯ ರುಚಿ ಹೆಚ್ಚಿಸುವ ಸೂಪರ್ ಸೈಡ್ ಡಿಶ್

ಬೆಳಗಿನ ಉಪಹಾರಕ್ಕೆ ದೋಸೆ, ಇಡ್ಲಿ, ಚಪಾತಿ ಅಥವಾ ಊಟಕ್ಕೆ, ಸಂಜೆ ಸ್ನ್ಯಾಕ್ಸ್‌ಗೆ ವಿಭಿನ್ನ ರುಚಿಯ ಚಟ್ನಿ ಬೇಕೆಂದರೆ ಬೆಳ್ಳುಳ್ಳಿ-ಕೊತ್ತಂಬರಿ ಸೊಪ್ಪಿನ ಚಟ್ನಿ ಟ್ರೈ ಮಾಡಿ. ಖಾರ, ಹುಳಿ ಮತ್ತು ಬೆಳ್ಳುಳ್ಳಿಯ ಘಮಘಮಿಸುವ ಫ್ಲೇವರ್ ಜೊತೆಗೆ ಈ ಚಟ್ನಿ ಊಟದ ರುಚಿಯನ್ನು ಡಬಲ್ ಮಾಡುತ್ತದೆ. ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಬೇಕಾಗುವ ಪದಾರ್ಥಗಳು:

ಕೊತ್ತಂಬರಿ ಸೊಪ್ಪು – 1 ಕಟ್ಟು
ಬೆಳ್ಳುಳ್ಳಿ – 6 ರಿಂದ 8 ಎಸಳು
ಹಸಿರು ಮೆಣಸಿನಕಾಯಿ – 2 ರಿಂದ 3
ಶುಂಠಿ – 1 ಚಿಕ್ಕ ತುಂಡು (ಐಚ್ಛಿಕ)
ಹುಣಸೆಹಣ್ಣು – ಸಣ್ಣ ನಿಂಬೆ ಗಾತ್ರದಷ್ಟು
ಜೀರಿಗೆ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿದ್ದಷ್ಟು

ಮಾಡುವ ವಿಧಾನ:

ಮೊದಲು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ. ಬಳಿಕ ಮಿಕ್ಸಿ ಜಾರ್‌ಗೆ ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ, ಹುಣಸೆಹಣ್ಣು, ಜೀರಿಗೆ ಮತ್ತು ಉಪ್ಪು ಹಾಕಿ.

ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಚಟ್ನಿ ತುಂಬಾ ತೆಳುವಾಗದಂತೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಹಾಕಿದರೆ ರುಚಿ ಚೆನ್ನಾಗಿರುತ್ತದೆ.

ಸವಿಯಲು ಸೂಪರ್ ಕಾಂಬಿನೇಷನ್

ಈ ರುಚಿಕರ ಚಟ್ನಿ ದೋಸೆ, ಇಡ್ಲಿ, ಅನ್ನ, ಚಪಾತಿ, ಪರೋಟ, ಸ್ಯಾಂಡ್‌ವಿಚ್ ಜೊತೆಗೆ ಅದ್ಭುತವಾಗಿ ಹೊಂದುತ್ತದೆ. ಒಮ್ಮೆ ಮಾಡಿ ನೋಡಿದರೆ ಮತ್ತೆ ಮತ್ತೆ ಮಾಡಬೇಕು ಅನಿಸುತ್ತೆ.

Must Read