ಆರೋಗ್ಯಕ್ಕೂ ಒಳ್ಳೆಯದು, ರುಚಿಗೂ ಸಖತ್ ಎನಿಸುವ ನುಗ್ಗೆಕಾಯಿ ಬಿರಿಯಾನಿ ಮಧ್ಯಾಹ್ನದ ಊಟಕ್ಕೆ ಸೂಪರ್ ಆಯ್ಕೆ. ಒಮ್ಮೆ ಈ ಬಿರಿಯಾನಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ ನೋಡಿ.
ಬೇಕಾಗುವ ಪದಾರ್ಥಗಳು:
ನುಗ್ಗೆಕಾಯಿ – 2
ಬಾಸುಮತಿ ಅಕ್ಕಿ – 1 ಕಪ್
ಈರುಳ್ಳಿ – 2
ಟೊಮೆಟೊ – 1
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಮೊಸರು – 2 ಟೇಬಲ್ ಸ್ಪೂನ್
ಖಾರದ ಪುಡಿ – 1/2 ಟೀ ಸ್ಪೂನ್
ಅರಿಶಿನ – 1/4 ಟೀ ಸ್ಪೂನ್
ಬಿರಿಯಾನಿ ಮಸಾಲೆ – 1 ಟೀ ಸ್ಪೂನ್
ಪುದೀನಾ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಲವಂಗ – 2
ಏಲಕ್ಕಿ – 2
ಚಕ್ಕೆ – 1 ಚಿಕ್ಕ ತುಂಡು
ಪಲಾವ್ ಎಲೆ – 1
ತುಪ್ಪ / ಎಣ್ಣೆ – 3 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 1½ ಕಪ್
ಮಾಡುವ ವಿಧಾನ:
ಮೊದಲು ನುಗ್ಗೆಕಾಯಿಯನ್ನು ಸ್ವಲ್ಪ ಉಪ್ಪು ಹಾಕಿ ಅರ್ಧ ಬೇಯಿಸಿಕೊಳ್ಳಿ. ಕುಕ್ಕರ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಲವಂಗ, ಏಲಕ್ಕಿ, ಚಕ್ಕೆ, ಪಲಾವ್ ಎಲೆ ಹಾಕಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.
ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಟೊಮೆಟೊ ಹಾಕಿ ಚೆನ್ನಾಗಿ ಬಾಡಿಸಿ. ಈಗ ಅರಿಶಿನ, ಖಾರದ ಪುಡಿ, ಬಿರಿಯಾನಿ ಮಸಾಲೆ, ಮೊಸರು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಬೇಯಿಸಿದ ನುಗ್ಗೆಕಾಯಿ, ಪುದೀನಾ, ಕೊತ್ತಂಬರಿ ಹಾಕಿ 2 ನಿಮಿಷ ಬೇಯಿಸಿ.
ಕೊನೆಯಲ್ಲಿ ನೆನೆಸಿದ ಅಕ್ಕಿ, ನೀರು, ಉಪ್ಪು ಹಾಕಿ ಕುಕ್ಕರ್ ಮುಚ್ಚಿ 2 ಸೀಟಿ ಕೂಗಿಸಿ. ಪ್ರೆಶರ್ ಇಳಿದ ಬಳಿಕ ನಿಧಾನವಾಗಿ ಮಿಕ್ಸ್ ಮಾಡಿದರೆ ರುಚಿಯಾದ ನುಗ್ಗೆಕಾಯಿ ಬಿರಿಯಾನಿ ಸವಿಯಲು ಸಿದ್ಧ.



