ಸಾಮಾಗ್ರಿಗಳು
ತೆಂಗಿನಕಾಯಿ
ಅನ್ನ
ಉಪ್ಪು
ಹಸಿಮೆಣಶೂ
ಕರಿಬೇವಿನ ಎಲೆ
ತುಪ್ಪ
ಸಾಸಿವೆ
ಜೀರಿಗೆ
ಉದ್ದಿನಬೇಳೆ
ಕಡಲೆಬೇಳೆ
ಮಾಡುವ ವಿಧಾನ
ಮೊದಲು ಅಕ್ಕಿಗೆ ನೀರು ಹಾಕಿ, ಮೂರು ವಿಶಲ್ ಕೂಗಿಸಿ. ನಂತರ ಬಿಸಿ ಅನ್ನಕ್ಕೆ ಹಸಿ ತೆಂಗಿನಕಾಯಿ ತುರಿ ಹಾಕಿ
ಆನಂತರ ಉಪ್ಪು, ಹಸಿಮೆಣಸಿನ ತುಂಡು ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ
ಆನಂತರ ಬಾಣಲೆಗೆ ತುಪ್ಪ ಹಾಕಿ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಹುರಿಯಿರಿ. ಆ ಮಿಶ್ರಣವನ್ನು ಅನ್ನಕ್ಕೆ ಹಾಕಿದರೆ ಪ್ರಸಾದ ರೆಡಿ. ಇದು ದಿನನಿತ್ಯದ ನೈವೈದ್ಯಕ್ಕೆ ಸೂಕ್ತವಾದ ಸರಳವಾದ ತಿನಿಸಲಾಗಿದೆ.



