September 14, 2026
Monday, September 14, 2026
spot_img

ಇಂದು ಆರ್‌ಸಿಬಿ-ಡೆಲ್ಲಿ ಹೈ ವೋಲ್ಟೇಜ್‌ ಪಂದ್ಯ, ಆದರೆ ಮಳೆ ಅಡ್ಡಿಯಾಗ್ಬೋದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಐಪಿಎಲ್‌ನ ಹೈ ವೋಲ್ಟೇಜ್‌ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಎದುರಾಗಲಿದೆ. ನವದೆಹಲಿಯ ಅರುಣ್‌ ಜೆಟ್ಲಿ ಸ್ಟೇಡಿಯಂನಲ್ಲಿ ಮ್ಯಾಚ್‌ ನಡೆಯಲಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಗಳಿವೆ.

ಇಂದು ಪಂದ್ಯ ಆರಂಭದ ವೇಳೆ ತಾಪಮಾನ 28–29°C ದಷ್ಟು ಇರುತ್ತದೆ. ಈ ಸಮಯದಲ್ಲಿ ಸ್ವಲ್ಪ ತೇವಾಂಶ ಇರುತ್ತದೆ. ಆದರೆ ಮಳೆ ಬರುವ ಸಾಧ್ಯತೆ ಸ್ವಲ್ಪ ಕಡಿಮೆಯೇ ಎನ್ನಲಾಗಿದೆ. ಇನ್ನು ಪಂದ್ಯದ ಫಸ್ಟ್‌ ಇನ್ನಿಂಗ್ಸ್ ಮುಗಿದ ನಂತರ ಸ್ಟೇಡಿಯಂನಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಇದೆ.‌ ಇದು ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಕಷ್ಟವಾಗುತ್ತದೆ.

ಯಾವುದೇ ಟೀಂ ಟಾಸ್‌ ಗೆದ್ದರೂ ಅವರು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವುದು ಉತ್ತಮವಾಗಿದೆ. ಇಲ್ಲಿ ಟಾಸ್‌ ಗೆದ್ದವರಿಗೇ ಚಾಯ್ಸ್‌ ಚೆನ್ನಾಗಿ ಸಿಗಲಿದೆ. ಈ ಫೀಲ್ಡ್‌ನಲ್ಲಿ ಶೇ. 51ರಷ್ಟು ಚೇಸಿಂಗ್‌ ಮಾಡಿದ ತಂಡಗಳಿಗೆ ಗೆಲುವು ಸಿಕ್ಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !