April 27, 2026
Monday, April 27, 2026
spot_img

ಮುಖಕ್ಕೆ ಕೇಕ್ ಹಚ್ಚಿದ್ದೇ ತಪ್ಪಾಯ್ತು: ಬರ್ತ್‌ಡೇ ಬಾಯ್ ಕೈಯಿಂದ ಹೋಯಿತು ಗೆಳೆಯರ ಪ್ರಾಣ

ಸಂತೋಷದಲ್ಲಿ ಆರಂಭವಾದ ಹುಟ್ಟುಹಬ್ಬದ ಆಚರಣೆ ಕ್ಷಣಾರ್ಧದಲ್ಲಿ ದುರಂತಕ್ಕೆ ತಿರುಗಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸ್ನೇಹಿತನ ಮುಖಕ್ಕೆ ಕೇಕ್ ಹಚ್ಚಿದ ವಿಚಾರಕ್ಕೆ ಆರಂಭವಾದ ಸಣ್ಣ ಗಲಾಟೆ, ಗುಂಡಿನ ದಾಳಿಗೆ ತಿರುಗಿ ಮೂವರು ಯುವಕರು ಜೀವ ಕಳೆದುಕೊಂಡಿದ್ದಾರೆ.

ಮೃತರನ್ನು ಅಮರ್‌ದೀಪ್ ಸೈನಿ, ಮನೀಶ್ ಸೈನಿ ಮತ್ತು ಆಕಾಶ್ ಸೈನಿ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಜೀತು ಸೈನಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮುಖಕ್ಕೆ ಕೇಕ್ ಹಚ್ಚಿದ್ದಾರೆ ಇದರಿಂದ ಕೋಪಗೊಂಡು ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಬಳಿಕ ಆತ ಹಾಗೂ ಆತನ ಬೆಂಬಲಿಗರು ಶಸ್ತ್ರಾಸ್ತ್ರಗಳೊಂದಿಗೆ ವಾಪಾಸ್ ಬಂದು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !