October 10, 2026
Saturday, October 10, 2026
spot_img

Energy Boost | ದಣಿವಿಲ್ಲದೆ ದಿನಪೂರ್ತಿ ಚುರುಕಾಗಿರೋದು ಹೇಗೆ?

ಬೆಳಗ್ಗೆ ಚೆನ್ನಾಗಿ ದಿನ ಆರಂಭಿಸಿದರೂ ಮಧ್ಯಾಹ್ನಕ್ಕೆ ಸುಸ್ತು, ಸಂಜೆ ಹೊತ್ತಿಗೆ ಸಂಪೂರ್ಣ ದಣಿವು ಇದು ಈಗ ಹಲವರ ಸಾಮಾನ್ಯ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ಸರಿಯಾದ ಆಹಾರ ಕೊರತೆ, ನಿದ್ರೆ ಅಭಾವ ಮತ್ತು ಕಡಿಮೆ ಚಲನೆ ಇವೆಲ್ಲವೂ ದೇಹದ ಎನರ್ಜಿ ಮಟ್ಟವನ್ನು ಕಡಿಮೆ ಮಾಡುತ್ತವೆ. ಆದರೆ ಕೆಲವು ಸರಳ ಹವ್ಯಾಸಗಳಿಂದ ದಿನಪೂರ್ತಿ ಚುರುಕಾಗಿ ಇರಬಹುದು.

  • ಎದ್ದು ತಕ್ಷಣ ನೀರು ಕುಡಿಯುವುದು ಮತ್ತು ಹಗುರವಾದ ಸ್ಟ್ರೆಚಿಂಗ್ ಮಾಡುವುದರಿಂದ ದೇಹ ಆಕ್ಟಿವ್ ಆಗುತ್ತದೆ. ದಿನದ ಮೊದಲ ಒಂದು ಗಂಟೆ ಸರಿಯಾಗಿದ್ರೆ ಎನರ್ಜಿ ಮಟ್ಟವೂ ಚೆನ್ನಾಗಿರುತ್ತದೆ.
  • ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟದಲ್ಲಿ ಪ್ರೋಟೀನ್ ಸೇರಿಸಿದ್ರೆ ದೇಹಕ್ಕೆ ದೀರ್ಘ ಸಮಯ ಶಕ್ತಿ ಸಿಗುತ್ತದೆ. ಮೊಟ್ಟೆ, ಮೊಸರು, ನಟ್ಸ್ ಅಥವಾ ಕಾಳುಗಳು ಒಳ್ಳೆಯ ಆಯ್ಕೆ.
  • ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತರೆ ದೇಹ ಭಾರವಾಗುತ್ತದೆ. ಪ್ರತಿ ಒಂದು ಗಂಟೆಗೆ ಸ್ವಲ್ಪ ನಡೆದಾಡಿದ್ರೆ ರಕ್ತ ಸಂಚಾರ ಉತ್ತಮವಾಗುತ್ತದೆ.
  • ಡಿಹೈಡ್ರೇಶನ್ ಕೂಡ ಸುಸ್ತಿಗೆ ದೊಡ್ಡ ಕಾರಣ. ದಿನಪೂರ್ತಿ ಸ್ವಲ್ಪ ಸ್ವಲ್ಪವಾಗಿ ನೀರು ಕುಡಿಯುವುದು ಮುಖ್ಯ.
  • ಸ್ಟ್ರೆಸ್ ಹೆಚ್ಚು ಇದ್ದರೂ ದಣಿವು ಹೆಚ್ಚಾಗುತ್ತದೆ. ಕೆಲ ನಿಮಿಷ ಡೀಪ್ ಬ್ರೆದಿಂಗ್ ಅಥವಾ ಚಿಕ್ಕ ಬ್ರೇಕ್ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ.

ಎನರ್ಜಿ ಹೆಚ್ಚಿಸೋದು ದೊಡ್ಡ ವಿಷಯ ಅಲ್ಲ… ಸಣ್ಣ ಹವ್ಯಾಸಗಳನ್ನು ಸರಿಯಾಗಿ ಪಾಲಿಸಿದ್ರೆ ಸಾಕು, ದೇಹ ಸ್ವತಃ ಚುರುಕಾಗಿರುತ್ತದೆ.

Must Read