April 27, 2026
Monday, April 27, 2026
spot_img

ಬಿಸಿಲ ತಾಪದಿಂದ ರಕ್ಷಣೆ ಬೇಕೇ? ಹಾಗಿದ್ರೆ ಕೇಂದ್ರ ಸಚಿವ ಸಿಂಧಿಯಾ ನೀಡಿದ ಕೂಲ್ ಟಿಪ್ಸ್ ಫಾಲೋ ಮಾಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ದಿನೇ ದಿನೇ ಬಿಸಿಲ ತಾಪ ಏರಿಕೆಯಾಗುತ್ತಲ್ಲೇ ಇದ್ದು, ಜನರು ತೀವ್ರ ಶಾಖಕ್ಕೆ ಕಂಗಾಲಾಗಿದ್ದಾರೆ. ಇದರ ನಡುವೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೂಲ್​ ಆಗಿರಲು ಟಿಪ್ಸ್​ ಯೊಂದನ್ನು ನೀಡಿದ್ದಾರೆ. ಅದೇನೆಂದರೆ ಜೇಬಿನಲ್ಲಿ ಈರುಳ್ಳಿಯನ್ನು ಇಟ್ಟುಕೊಂಡಿರಿ ಎಂದು.

ಕಾರ್ಯಕ್ರಮವೊಂದರಲ್ಲಿ ಹೆಚ್ಚುತ್ತಿರುವ ತಾಪಮಾನದ ಕುರಿತು ಮಾತನಾಡಿದ ಅವರು, ನಾನು ನೋಡಲು ಯುವಕನಂತೆ ಕಾಣಬಹುವುದು. ಆದರೆ ನನಗೆ ವಯಸ್ಸಾಗಿದೆ. ಇಂದು ಜನರು ಎಲ್ಲೆಡೆ ಔಷಧೀಯ ಡಬ್ಬಿಗಳನ್ನು ಹೊತ್ತು ತಿರುಗುತ್ತಿದ್ದಾರೆ. ಆದರೆ ನಾನು ಈರುಳ್ಳಿಯನ್ನು ಇಟ್ಟುಕೊಳ್ಳುತ್ತಿದ್ದೇನೆ. ಇದರಿಂದ ಬಿಸಿಲಿನ ಬೇಗೆಯಿಂದ ತಕ್ಕಮಟ್ಟಿಗೆ ಸಮಾಧಾನ ಸಿಗಲಿದೆ ಎಂದು ಸಲಹೆ ನೀಡಿದ್ದಾರೆ.

ನಾನು ಕಾರಿನಲ್ಲಿ ಪ್ರಯಾಣಿಸುವ ವೇಳೆ ಎಸಿ ಬಳಸಲು ಬಯಸುವುದಿಲ್ಲ. ಅದೇ ರೀತಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಳ್ಳುವುದನ್ನು ಇಷ್ಟಪಡುವುದಿಲ್ಲ . ಮಧ್ಯಪ್ರದೇಶದ ಚಂಬಲ್ ಪ್ರದೇಶದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ತಾಪಮಾನವು 51 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ನೀವು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದಾಗಲೂ ನಾನು ಉತ್ತರ ಒಂದೇ. ‘ಇದು ಚಂಬಲ್ ಚರ್ಮ’. ಹೀಗಾಗಿ ನಿಮ್ಮ ಜೇಬಿನಲ್ಲಿ ಒಂದು ಈರುಳ್ಳಿಯನ್ನು ಇಟ್ಟುಕೊಳ್ಳಿ, ನಿಮಗೆ ಏನೂ ಆಗುವುದಿಲ್ಲ ಎಂದು ಹೇಳಿದರು.

ಈರುಳ್ಳಿಗಳನ್ನು ಇಟ್ಟುಕೊಳ್ಳುವುದು ಹಳೆಯ ಕಾಲದ ಸಂಪ್ರದಾಯಗಳು. ಆಯುರ್ವೇದವು ಪ್ರಗತಿ ಹೊಂದುತ್ತಿರುವ ಕಾಲದಲ್ಲಿ ಇಂತಹ ಹಳೆಯ ಮತ್ತು ಪರಿಣಾಮಕಾರಿ ಪದ್ಧತಿಗಳನ್ನು ನಾವು ಮರೆಯಬಾರದು ಎಂದು ಜನತೆಗೆ ಸಲಹೆ ನೀಡಿದರು.

ಈರುಳ್ಳಿ ಶಾಖವನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾದ ಸಾಂಪ್ರದಾಯಿಕ ಪರಿಹಾರವಾಗಿದೆ. ಗ್ರಾಮೀಣ ಜನರು ಹೆಚ್ಚಾಗಿ ಹೀಗೆಯೇ ಮಾಡುತ್ತಾರೆ. ಇದರಿಂದ ಶಾಖದ ಹೊಡೆತದಿಂದ ರಕ್ಷಿಸಬಹುದು ಅಥವಾ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !