April 29, 2026
Wednesday, April 29, 2026
spot_img

PEOPLE | ನಿಮ್ಮ ಸುತ್ತಮುತ್ತ ಇರುವವರಲ್ಲಿ ಮೆಚ್ಯೂರ್ಡ್‌ ಜನರನ್ನು ಹುಡುಕೋದು ಹೇಗೆ? ಅವರಲ್ಲಿ ಈ ಲಕ್ಷಣಗಳಿರುತ್ತವೆ

ಕೆಲವೊಬ್ಬರನ್ನು ನೋಡಿದಾಗ ಸ್ನೇಹ ಮಾಡಬೇಕು ಅನ್ನಿಸೋದಿಲ್ಲ. ಇವರ್ಯಾಕೆ ಫ್ರೆಂಡ್ಲಿ ಇಲ್ಲ ಎಂದುಕೊಳ್ತೀವಿ. ಆದರೆ ಅವರು ಈ ಎಲ್ಲ ಸ್ಟೇಜ್‌ಗಳನ್ನು ದಾಟಿ ಮೆಚ್ಯೂರ್ಡ್‌ ಆಗಿರುತ್ತಾರೆ. ಅಂಥವರ ಬಗ್ಗೆ ತಿಳ್ಕೋಬೇಕಾ? ಅಥವಾ ನೀವೇ ಮೆಚ್ಯೂರ್ಡ್‌ ಪರ್ಸನ್‌ ಅನ್ನೋದನ್ನು ತಿಳಿದುಕೊಳ್ಳಬೇಕು ಅಂದ್ರೆ ಇದನ್ನು ಪೂರ್ಣವಾಗಿ ಓದಿ..

ಈ ಜನರ ಲಕ್ಷಣಗಳಿವು..

ಹೊರಗಡೆ ಹೋಗೋದಕ್ಕಿಂತ, ಪಾರ್ಟಿ, ಫಂಕ್ಷನ್‌ಗೆ ಹೋಗೋದಕ್ಕಿಂತ ಮನೆಯಲ್ಲಿಯೇ ಇರೋಕೆ ಇಷ್ಟಪಡ್ತಾರೆ.

ಜಾಸ್ತಿ ಜನರಿರುವ ಕಡೆ, ಸಣ್ಣ ಸಣ್ಣ ಮಾತನ್ನು ಇಷ್ಟ ಪಡೋದಿಲ್ಲ. ಫ್ರೀ ಸಮಯದಲ್ಲಿ ಮನೆಯಲ್ಲಿಯೇ ಇರೋಕೆ ಇಷ್ಟಪಡ್ತಾರೆ. ಇವರಿಗೆ ಸೋಶಿಯಲ್‌ ಲೈಫ್‌ ಕಡಿಮೆ.

ಎಷ್ಟೋ ಮಂದಿಗೆ ಜನ್ಮದಿನ ಬರುತ್ತದೆ ಅಂದ್ರೆ ತುಂಬಾನೇ ಖುಷಿ ಇರುತ್ತದೆ. ಹೊಸ ಬಟ್ಟೆ, ಡೆಕೋರ್‌ ಅದು ಇದು ಎಂದು ಪ್ಲಾನ್‌ ಮಾಡ್ತಾರೆ. ಆದರೆ ಮೆಚ್ಯೂರ್ಡ್‌ ಜನರು ಈ ದಿನಕ್ಕಾಗಿ ಕಾಯೋದಿಲ್ಲ. ಉತ್ಸುಕರಾಗೋದಿಲ್ಲ.

ಜಾಸ್ತಿ ಮಾತನಾಡೋದ್ರಲ್ಲಿ ಖುಷಿ ಸಿಗೋದಿಲ್ಲ. ಎಲ್ಲರೊಂದಿಗೂ ಬೆರೆಯೋದಕ್ಕೆ ಇಷ್ಟಪಡೋದಿಲ್ಲ.

ಯಾವ ವಿಷಯವೂ ಇವರಿಗೆ ಉತ್ಸುಕತೆ ನೀಡೋದಿಲ್ಲ. ಕೆಲಸ, ಮನೆ, ಕುಟುಂಬ, ಜಿಮ್‌ ಇಷ್ಟೇ ಪ್ರಪಂಚವಾಗಿರುತ್ತದೆ.

ಅದು ಬೇಕು ಇದು ಬೇಕು ಅಂತ ಅನ್ನಿಸೋದಿಲ್ಲ. ಅವಶ್ಯಕತೆ ಇದ್ದದ್ದನ್ನು ಮಾತ್ರ ತೆಗೆದುಕೊಳ್ತಾರೆ. ಬಟ್ಟೆಗಳೇ ಆಗಲಿ ಕಡಿಮೆಗೆ ಸಿಕ್ತು, ಆಫರ್‌ನಲ್ಲಿ ಸಿಕ್ತು ಎಂದು ತೆಗೆದುಕೊಳ್ಳೋದಿಲ್ಲ. ನಾಲ್ಕೃ ಬಟ್ಟೆ ಇದ್ದರೂ ಅದೆಲ್ಲವೂ ಹೈ ಕ್ವಾಲಿಟಿಯದ್ದಾಗಿರುತ್ತದೆ.

ಹೊಸಬರದನ್ನು ಪರಿಚಯ ಮಾಡಿಕೊಂಡು ಸಂಬಂಧ ಬೆಳೆಸೋದಕ್ಕೆ ಇಷ್ಟಪಡೋದಿಲ್ಲ. ಎನರ್ಜಿ ವೇಸ್ಟ್‌ ಮಾಡಿಕೊಳ್ಳೋದಿಲ್ಲ.

ಯಾವ ಡ್ರಾಮಾ ನಡೆಯುತ್ತಿದ್ದರೆ ಆ ಜಾಗವನ್ನು ಕ್ಷಣದಲ್ಲಿಯೇ ಬಿಟ್ಟು ಹೊರಡುತ್ತಾರೆ. ನಿತ್ಯ ಮಲಗುವಾಗ ತಾವು ಮಾಡಿದ ಕೆಲಸ, ಮಾಡಬೇಕಾದ ಕೆಲಸವನ್ನು ನೆನೆಸಿಕೊಂಡು ನಿದ್ದೆಗೆ ಜಾರ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !