August 24, 2026
Monday, August 24, 2026
spot_img

ಗ್ಯಾಂಗ್‌ಟಕ್‌ನಲ್ಲಿ ಆಟಗಾರರ ಜತೆ ಆಟಗಾರನಾದ ಪ್ರಧಾನಿ ಮೋದಿ, ಫುಟ್ಬಾಲ್‌ ಗೇಮ್‌ ಅದ್ಭುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮುಗಿಸಿರುವ ಪ್ರಧಾನಿ ಮೋದಿ ಇದೀಗ ಸಿಕ್ಕಿಂನಲ್ಲಿ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡ್ತಿದ್ದಾರೆ.

ಈ ಆಕರ್ಷಕ ಫೋಟೊಗಳನ್ನು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದಾರೆ. ಗ್ಯಾಂಗ್‌ಟಕ್‌ನಲ್ಲಿ ಒಂದು ಅದ್ಭುತ ಬೆಳಗ್ಗೆಯನ್ನು ಕಂಡೆ. ನನ್ನ ಸ್ನೇಹಿತರ ಜೊತೆ ಫುಟ್‌ಬಾಲ್‌ ಆಡೋದಕ್ಕಿಂತ ಬೇರೆ ಖುಷಿ ಇನ್ನೊಂದೆಲ್ಲಿದೆ ಎಂದು ಬರೆದಿದ್ದಾರೆ.

ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ವಯಸ್ಸು ಅನ್ನೋದು ಬರೀ ಸಂಖ್ಯೆಯಷ್ಟೇ ಪ್ರಧಾನಿ ಮೋದಿಯಷ್ಟು ಎನರ್ಜಿ ದೇಶದ ಎಲ್ಲ ಜನರಿಗೂ ಬರಲಿ ಎಂದು ಕಮೆಂಟ್‌ ಮಾಡಿದ್ದಾರೆ.

ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಫುಟ್‌ಬಾಲ್‌ಗೆ ವಿಶಿಷ್ಠ ಸ್ಥಾನಮಾನ ಇದೆ. ಇಲ್ಲಿನ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡಿ ಪ್ರಧಾನಿ ಅತ್ಯುತ್ತಮ ಸಮಯವನ್ನು ಕಳೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !