April 29, 2026
Wednesday, April 29, 2026
spot_img

Healthy Cravings | ಡಯಟ್‌ನಲ್ಲಿ ಇದ್ದಾಗ ಕ್ರೇವಿಂಗ್ಸ್ ಕಂಟ್ರೋಲ್ ಮಾಡೋದು ಹೇಗೆ?

ಡಯಟ್ ಶುರು ಮಾಡಿದ ಮೊದಲ ಕೆಲವು ದಿನ ಎಲ್ಲವೂ ಸುಲಭ ಅನ್ನಿಸುತ್ತದೆ. ಆದರೆ ಸ್ವಲ್ಪ ದಿನಗಳ ಬಳಿಕ ಚಾಕೊಲೇಟ್, ಫಾಸ್ಟ್ ಫುಡ್, ಸಿಹಿ ಅಥವಾ ಎಣ್ಣೆಯ ತಿಂಡಿ ತಿನ್ನೋ ಆಸೆ ಜಾಸ್ತಿ ಆಗುತ್ತೆ. ಇದನ್ನೇ ಕ್ರೇವಿಂಗ್ಸ್ ಅಂತಾರೆ. ಇದನ್ನು ಕಂಟ್ರೋಲ್ ಮಾಡೋದು ಕಷ್ಟ ಅನಿಸಿದರೂ, ಕೆಲವು ಸ್ಮಾರ್ಟ್ ಹ್ಯಾಬಿಟ್ಸ್ ಫಾಲೋ ಮಾಡಿದ್ರೆ ಸುಲಭವಾಗುತ್ತದೆ.

  • ಬಹಳ ಹೊತ್ತು ಏನೂ ತಿನ್ನದೆ ಇದ್ದರೆ ಕ್ರೇವಿಂಗ್ಸ್ ಹೆಚ್ಚಾಗುತ್ತವೆ. ಅದಕ್ಕಾಗಿಯೇ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಮುಖ್ಯ. ಹೊಟ್ಟೆ ತುಂಬಿದ್ರೆ ಜಂಕ್ ಫುಡ್ ಆಸೆ ಕಡಿಮೆ ಆಗುತ್ತದೆ.
  • ಡಯಟ್‌ನಲ್ಲಿ ಪ್ರೋಟೀನ್ ಕಡಿಮೆ ಇದ್ದರೆ ಬೇಗ ಹಸಿವು ಆಗುತ್ತದೆ. ಮೊಟ್ಟೆ, ಮೊಸರು, ಪೀನಟ್ ಬಟರ್, ಸ್ಪ್ರೌಟ್ಸ್ ಅಥವಾ ನಟ್ಸ್ ತಿಂದರೆ ಹೆಚ್ಚು ಹೊತ್ತು ತೃಪ್ತಿ ಸಿಗುತ್ತದೆ.
  • ಕೆಲವೊಮ್ಮೆ ದಾಹವನ್ನೇ ನಾವು ಹಸಿವು ಅಂತ ಭಾವಿಸುತ್ತೇವೆ. ನೀರು ಕುಡಿದು 10 ನಿಮಿಷ ಕಾಯ್ದು ನೋಡಿ. ಆಸೆ ಕಡಿಮೆಯಾಗಬಹುದು.
  • ಚಾಕೊಲೇಟ್ ತಿನ್ನೋ ಆಸೆ ಬಂದರೆ ಹಣ್ಣು, ಡಾರ್ಕ್ ಚಾಕೊಲೇಟ್ ಅಥವಾ ಡ್ರೈ ಫ್ರೂಟ್ಸ್ ಆಯ್ಕೆ ಮಾಡಬಹುದು.
  • ಬೋರ್ ಆದಾಗಲೂ ಅನಗತ್ಯವಾಗಿ ತಿನ್ನೋ ಆಸೆ ಬರುತ್ತದೆ. ಕೆಲಸ, ವಾಕ್ ಅಥವಾ ಬೇರೆ ಚಟುವಟಿಕೆಯಲ್ಲಿ ಮನಸ್ಸು ತೊಡಗಿಸಿಕೊಂಡ್ರೆ ಕ್ರೇವಿಂಗ್ಸ್ ಕಡಿಮೆಯಾಗುತ್ತವೆ.

ಡಯಟ್‌ನಲ್ಲಿ ಕ್ರೇವಿಂಗ್ಸ್ ಬರೋದು ಸಹಜ… ಆದರೆ ಅದನ್ನು ಹೇಗೆ ಹ್ಯಾಂಡಲ್ ಮಾಡ್ತೀರೋದು ನಿಮ್ಮ ಫಿಟ್ನೆಸ್ ಫಲಿತಾಂಶ ನಿರ್ಧರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !