April 29, 2026
Wednesday, April 29, 2026
spot_img

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: 9 ಸಾವಿರಕ್ಕೂ ಹೆಚ್ಚು ಖಾತೆಗಳಿಗೆ ವಾಟ್ಸಪ್ ‘ಬ್ಯಾನ್ ಬಿಸಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ವಂಚನೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಿರುವ ವಾಟ್ಸಪ್, ಕಳೆದ 12 ವಾರಗಳಲ್ಲಿ ಡಿಜಿಟಲ್ ಅರೆಸ್ಟ್ ಮಾದರಿಯ ಮೋಸಗಳಲ್ಲಿ ತೊಡಗಿದ್ದ 9,400ಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ಎಂಬ ಮಾಹಿತಿ ಸುಪ್ರೀಂ ಕೋರ್ಟ್ ಮುಂದೆ ಬಹಿರಂಗವಾಗಿದೆ.

ಈ ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮಾಹಿತಿ ನೀಡಿದ್ದು, ಸರ್ಕಾರಿ ಸಂಸ್ಥೆಗಳಾದ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್, Ministry of Electronics and Information Technology ಮತ್ತು ದೂರಸಂಪರ್ಕ ಇಲಾಖೆಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಮೋಸಗಾರರು ಪೊಲೀಸ್, ಸಿಬಿಐ ಮತ್ತು ಇತರೆ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅಧಿಕೃತ ಲೋಗೋ ಹಾಗೂ ದಾಖಲೆಗಳನ್ನು ಬಳಸಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇಂತಹ ವಂಚನೆ ತಡೆಯಲು ಲೋಗೋ ಗುರುತಿಸುವ ತಂತ್ರಜ್ಞಾನ, ಅನುಮಾನಾಸ್ಪದ ಖಾತೆಗಳ ಮೇಲ್ವಿಚಾರಣೆ ಹಾಗೂ ಹೊಸ ಖಾತೆಗಳಿಂದ ಬರುವ ಕರೆಗಳಿಗೆ ಎಚ್ಚರಿಕೆ ಸಂದೇಶ ನೀಡುವಂತಹ ಹಲವು ಹೊಸ ಭದ್ರತಾ ಕ್ರಮಗಳನ್ನು ವಾಟ್ಸಪ್ ಜಾರಿಗೆ ತರಲು ಮುಂದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !