June 11, 2026
Thursday, June 11, 2026
spot_img

ಅಮೆರಿಕ ಮುಂದೆ ಶರಣಾಯಿತೇ ಇರಾನ್? ಡೊನಾಲ್ಡ್ ಟ್ರಂಪ್ ಪೋಸ್ಟ್ ನ ಅಸಲಿಯತ್ತೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಪೋಸ್ಟ್ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕದನ ಆರಂಭವಾದ ದಿನದಿಂದ ಇಲ್ಲಿವರೆಗೆ ಮಂಡಿಯೂರದ ಇರಾನ್, ಇದೀಗ ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಅಮೆರಿಕದ ಬಳಿ ಕೇಳಿಕೊಂಡಿದೆ ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಈ ಕುರಿತು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಬರೆದುಕೊಂಡಿರುವ ಡೊನಾಲ್ಡ್ ಟ್ರಂಪ್, ಇರಾನ್ ನನಗೆ ಮಾಹಿತಿ ನೀಡಿದೆ. ಅದೇನೆಂದರೆ ಈಗಾಗಲೇ ಅವರು ಸಂಪೂರ್ಣ ಕುಸಿತದ ಹಾದಿಯಲ್ಲಿದ್ದು, ಹೀಗಾಗಿ ಈ ಎಲ್ಲವನ್ನು ಸರಿಪಡಿಸಿಕೊಳ್ಳಲು ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ನಮಗೆ ವಿನಂತಿಸಿದ್ದಾರೆ. ಈ ಕಾರಣದಿಂದಾಗಿ ನಾವು ಅವರು ಅದನ್ನು ಮಾಡಲು ಬಲಿಷ್ಠವಾಗಿದ್ದೇವೆ ಎಂದು ನಂಬುತ್ತೇನೆ ಎಂದು ತಿಳಿಸಿದ್ದಾರೆ.

ಟ್ರಂಪ್ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಇಲ್ಲಿವರೆಗೆ ಯಾರಿಗೂ ತಲೆಬಾಗದ ಇರಾನ್, ಈಗ ಅಮೆರಿಕ ಮುಂದೆ ಮಂಡಿಯೂರಿತೇ ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಈ ಸಂದೇಶ ಮೂಲದ ನಿಗೂಢವಾಗಿಯೇ ಉಳಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !