April 28, 2026
Tuesday, April 28, 2026
spot_img

ಅನಿಲ್ ಅಂಬಾನಿಗೆ ಮತ್ತೆ ಇಡಿ ಶಾಕ್: ಐಷಾರಾಮಿ ಫ್ಲ್ಯಾಟ್, ಖಂಡಾಲ ಫಾರ್ಮ್‌ಹೌಸ್ ಜಪ್ತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅನಿಲ್ ಅಂಬಾನಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಜಾರಿ ನಿರ್ದೇಶನಾಲಯವು ಇದೀಗ ಮತ್ತೆ ಸುಮಾರು 3,034 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡುವ ಮೂಲಕ ದೊಡ್ಡ ಏಟನ್ನೇ ನೀಡಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳಿಗೆ ಸೇರಿದ ಮುಂಬೈನಲ್ಲಿರುವ ಐಷಾರಾಮಿ ಫ್ಲ್ಯಾಟ್ ಮತ್ತು ಪ್ರವಾಸಿ ತಾಣ ಖಂಡಾಲದಲ್ಲಿರುವ ಬೃಹತ್ ಫಾರ್ಮ್‌ಹೌಸ್ ಅನ್ನು ವಶಕ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಅಹಮದಾಬಾದ್ ಸಮೀಪದ ಸಾನಂದ್‌ನಲ್ಲಿರುವ ಜಮೀನು. ರೈಸ್ ಇ ಟ್ರಸ್ಟ್ ಅಡಿಯಲ್ಲಿ ಇರಿಸಲಾಗಿದ್ದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ 7.71 ಕೋಟಿ ರೂಪಾಯಿ ಮೌಲ್ಯದ ಷೇರುಗಳು ವಶಪಡಿಸಿಕೊಳ್ಳಲಾಗಿದೆ.

ಅನಿಲ್ ಅಂಬಾನಿ ವಿರುದ್ಧ ಬ್ಯಾಂಕುಗಳಿಗೆ ವಂಚನೆ ಮತ್ತು ಹಣದ ದುರುಪಯೋಗ ಮಾಡಿರುವ ಆರೋಪ ವಿದ್ದು, ಈ ಸಂಬಂಧ ಆಸ್ತಿಗಳನ್ನು ಜಪ್ತಿ ಮಾಡಿ ತನಿಖೆಯನ್ನು ಚುರುಕುಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !