April 29, 2026
Wednesday, April 29, 2026
spot_img

ತೆಲಂಗಾಣ ಪೊಲೀಸರಿಗೆ ಸಿಹಿ ಸುದ್ದಿ: ಜನ್ಮದಿನ, ವೆಡ್ಡಿಂಗ್ ಆನಿವರ್ಸರಿಗೆ ಸಿಗಲಿದೆ ವಿಶೇಷ ರಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಟುಂಬದ ಪ್ರಮುಖ ಕ್ಷಣಗಳಲ್ಲೂ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡುವ ಪೊಲೀಸ್ ಸಿಬ್ಬಂದಿಗೆ ತೆಲಂಗಾಣ ಸರ್ಕಾರ ವಿಶೇಷ ಕೊಡುಗೆ ಘೋಷಿಸಿದೆ. ಇನ್ನು ಮುಂದೆ ಪೊಲೀಸ್ ಸಿಬ್ಬಂದಿಗೆ ಜನ್ಮದಿನ ಮತ್ತು ಮದುವೆ ವಾರ್ಷಿಕೋತ್ಸವದಂದು ರಜೆ ನೀಡುವ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಈ ಕುರಿತು ಘೋಷಣೆ ಮಾಡಿರುವ ಬಿ. ಶಿವಧರ್ ರೆಡ್ಡಿ, ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ಜೀವನ ಮತ್ತು ಕರ್ತವ್ಯದ ನಡುವಿನ ಸಮತೋಲನ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕುಟುಂಬದೊಂದಿಗೆ ವಿಶೇಷ ದಿನಗಳನ್ನು ಕಳೆಯಲು ಅವಕಾಶ ಕಲ್ಪಿಸುವುದು ಸಿಬ್ಬಂದಿಯ ಮನೋಬಲ ಹೆಚ್ಚಿಸಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ:

ಈ ಸೌಲಭ್ಯವು ಹುದ್ದೆ ಭೇದವಿಲ್ಲದೆ ಪೊಲೀಸ್ ಪಡೆಯ ಎಲ್ಲ ಸದಸ್ಯರಿಗೂ ಅನ್ವಯವಾಗಲಿದೆ. ಆದರೆ ತುರ್ತು ಪರಿಸ್ಥಿತಿ ಅಥವಾ ಸೇವಾ ಅವಶ್ಯಕತೆ ಇರುವ ಅಪರೂಪದ ಸಂದರ್ಭಗಳಲ್ಲಿ ಮಾತ್ರ ರಜೆ ನಿರಾಕರಿಸುವ ಅವಕಾಶ ಅಧಿಕಾರಿಗಳಿಗೆ ಇರಲಿದೆ.

ಪೂರ್ವ ಲಿಖಿತ ಮನವಿ ಮತ್ತು ದಾಖಲೆಗಳ ಆಧಾರದಲ್ಲಿ ರಜೆ ಮಂಜೂರು ಮಾಡಲಾಗುವುದು. ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕೆ ಆದ್ಯತೆ ನೀಡುವ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !