ಗಾತ್ರದಲ್ಲಿ ಚಿಕ್ಕದಾದರೂ ಆರೋಗ್ಯದ ವಿಚಾರದಲ್ಲಿ ದೊಡ್ಡ ಮ್ಯಾಜಿಕ್ ಮಾಡಬಲ್ಲುದು ಈ ಪುಟ್ಟ ಸಬ್ಜಾ ಬೀಜ. ನೀರಿನಲ್ಲಿ ನೆನೆಸಿದ ಕೆಲವೇ ನಿಮಿಷಗಳಲ್ಲಿ ಉಬ್ಬಿ ಜೆಲ್‌ನಂತೆ ಆಗುವ ಈ ಬೀಜ, ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲ, ಹಲವಾರು ಆರೋಗ್ಯ ಲಾಭಗಳನ್ನು ಕೂಡ ಒದಗಿಸುತ್ತದೆ. ಬೇಸಿಗೆಯಲ್ಲಿ ಇದರ ಸೇವನೆ ಇನ್ನಷ್ಟು ಪ್ರಯೋಜನಕಾರಿ.
- ಸಬ್ಜಾ ಬೀಜ ದೇಹದ ಉಷ್ಣತೆ ಕಡಿಮೆ ಮಾಡಲು ಸಹಕಾರಿ. ಬೇಸಿಗೆಯಲ್ಲಿ ಶರಬತ್, ನಿಂಬೆಹಣ್ಣು ನೀರು ಅಥವಾ ಹಾಲಿನ ಪಾನೀಯಗಳಲ್ಲಿ ಸೇರಿಸಿ ಕುಡಿದರೆ ದೇಹ ತಂಪಾಗಿರುತ್ತದೆ.
- ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಇರುತ್ತದೆ. ಹೀಗಾಗಿ ಅನಗತ್ಯ ಹಸಿವು ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.
- ಮಲಬದ್ಧತೆ, ಹೊಟ್ಟೆ ಉರಿ ಮತ್ತು ಅಜೀರ್ಣ ಸಮಸ್ಯೆಗಳಿಗೆ ಸಬ್ಜಾ ಬೀಜ ಉತ್ತಮ.
- ಆ್ಯಂಟಿಆಕ್ಸಿಡೆಂಟ್‌ಗಳಿರುವುದರಿಂದ ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ. ದೇಹದ ಒಳಗಿನಿಂದಲೇ ಹೊಳಪು ಹೆಚ್ಚಿಸಲು ನೆರವಾಗುತ್ತದೆ.
- ಒಂದು ಚಮಚ ಸಬ್ಜಾ ಬೀಜವನ್ನು 10-15 ನಿಮಿಷ ನೀರಿನಲ್ಲಿ ನೆನೆಸಿ, ಬಳಿಕ ಜ್ಯೂಸ್, ಬಟರ್‌ಮಿಲ್ಕ್ ಅಥವಾ ಡಿಟಾಕ್ಸ್ ಡ್ರಿಂಕ್‌ಗೆ ಸೇರಿಸಿ ಕುಡಿಯಬಹುದು.



