April 29, 2026
Wednesday, April 29, 2026
spot_img

WEATHER | ರಾಜ್ಯದಲ್ಲಿಂದು ಬಿರುಗಾಳಿ ಜತೆ ಆಲಿಕಲ್ಲು ಮಳೆ, ಆದರೆ ಎಲ್ಲಾ ಜಿಲ್ಲೆಯಲ್ಲೂ ಅಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಲಿನ ಬೇಗೆಯಿಂದ ಹೈರಾಣಾಗಿರುವ ಜನರಿಗೆ ಆಲಿಕಲ್ಲು ಮಳೆ ನೆಮ್ಮದಿ ತರಿಸಲಿದೆ. ಆದರೆ ಇದು ಎಲ್ಲಾ ಜಿಲ್ಲೆಗಳಿಗೆ ಅಲ್ಲ!

ಉತ್ತರ ಕರ್ನಾಟಕದಲ್ಲಿ ಮಾತ್ರ ಆಲಿಕಲ್ಲು ಅಬ್ಬರ ಜೋರಾಗಿರಲಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಮಳೆಯ ಛಾಯೆಯೂ ಇಲ್ಲದಂತಹ ಬಿಸಿಲು ಇರಲಿದೆ.

ಇನ್ನೂ ಎರಡು ಮೂರು ದಿನ ಆಲಿಕಲ್ಲು ಮಳೆ ಸುರಿಯಲಿದೆ. ಇನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಶಿವಮೊಗ್ಗ ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ. ಜೋರು ಗಾಳಿಯೂ ಇರಲಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆ, ಬಿಸಿಲು ಹಾಗೂ ಗಾಳಿ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !