ಮೇಷ
ದಿನ ಸಾಮಾನ್ಯವಾಗಿ ಆರಂಭವಾದರೂ ಬಳಿಕ ಮಹತ್ವದ ಬೆಳವಣಿಗೆ ಸಂಭವಿಸಬಹುದು. ವೈಯಕ್ತಿಕ ಗುರಿ ಸಾಧನೆಗೆ ಹೆಚ್ಚು ಶ್ರಮ ಹಾಕುವಿರಿ.
ವೃಷಭ
ಜವಾಬ್ದಾರಿ ಹೆಚ್ಚಾಗುವ ದಿನ. ಯೋಚಿಸಿದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಕುಟುಂಬದ ಆಶಯಗಳು ಈಡೇರುವ ಸಾಧ್ಯತೆ ಇದೆ.
ಮಿಥುನ
ನಿಮಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆ ಸಂಭವಿಸಬಹುದು. ಸಂಬಂಧಗಳಲ್ಲಿ ತಾಳ್ಮೆ ಅಗತ್ಯ. ಸಣ್ಣ ವಿಷಯವನ್ನು ನಿರ್ಲಕ್ಷ್ಯಿಸದೆ ಆರೋಗ್ಯದ ಕಡೆ ಗಮನ ಕೊಡಿ.
ಕಟಕ
ಆರಂಭದಲ್ಲಿ ಸವಾಲು ಕಂಡರೂ ಬಳಿಕ ಪರಿಸ್ಥಿತಿ ನಿಮ್ಮ ಪರವಾಗಲಿದೆ. ಆಪ್ತರ ಭೇಟಿ ಸಂತೋಷ ಹೆಚ್ಚಿಸಲಿದೆ. ಆರ್ಥಿಕವಾಗಿ ಉತ್ತಮ ಬೆಳವಣಿಗೆ ಕಂಡುಬರಬಹುದು.
ಸಿಂಹ
ವೃತ್ತಿಯಲ್ಲಿ ಒತ್ತಡ ಹೆಚ್ಚಿರಬಹುದು. ಇತರರೊಂದಿಗೆ ವ್ಯವಹಾರದಲ್ಲಿ ಸಹನೆ ಅಗತ್ಯ. ಆರ್ಥಿಕ ಲಾಭ ಸಾಧ್ಯತೆ ಇದ್ದರೂ ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.
ಕನ್ಯಾ
ಕೆಲಸದ ಒತ್ತಡ ದಿನವಿಡೀ ಕಾಡಬಹುದು. ಸಣ್ಣ ತಪ್ಪು ದೊಡ್ಡ ಪರಿಣಾಮ ತರಬಹುದಾದ್ದರಿಂದ ಎಚ್ಚರಿಕೆ ಇರಲಿ.
ತುಲಾ
ತೃಪ್ತಿ ನೀಡುವ ದಿನ. ಖಾಸಗಿ ಬದುಕಿನಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಲಿದೆ. ಮುಖ್ಯ ಉದ್ದೇಶ ಸಾಧನೆಗೆ ಅವಕಾಶ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಕಂಡರೂ ಸಾಲದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ವೃಶ್ಚಿಕ
ಸಣ್ಣ ವಿಷಯಗಳನ್ನು ಕಡೆಗಣಿಸದಿರಿ. ವೈಯಕ್ತಿಕ ವಿಚಾರಗಳಲ್ಲಿ ಚಿಂತೆ ಕಾಡಬಹುದು. ಭಾವನಾತ್ಮಕ ಏರುಪೇರು ಇದ್ದರೂ ಸಹಕಾರದ ಮನೋಭಾವ ಬೆಳೆಸಿದರೆ ಪರಿಸ್ಥಿತಿ ಸುಧಾರಿಸಲಿದೆ.
ಧನು
ಹೊಸ ಯೋಜನೆಗಳಿಗೆ ಕೈಹಾಕಲು ಸೂಕ್ತ ಸಮಯ. ಸತತ ಪ್ರಯತ್ನಕ್ಕೆ ಫಲ ಸಿಗಲಿದೆ. ಬಡ್ತಿ, ಧನಲಾಭ ಅಥವಾ ಅನಿರೀಕ್ಷಿತ ಶುಭ ಸುದ್ದಿ ಖುಷಿ ತರಬಹುದು.
ಮಕರ
ಇತರರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಾಗ ಎಚ್ಚರಿಕೆ ಇರಲಿ. ಊಹಾಪೋಹಗಳಿಗೆ ಬೆಲೆ ಕೊಡದೆ ವಾಸ್ತವ ಅರಿತು ನಡೆದುಕೊಳ್ಳಿ.
ಕುಂಭ
ಸವಾಲುಗಳ ದಿನವಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಕೆಲಸಗಳಲ್ಲಿ ಅಡ್ಡಿ, ಮಾನಸಿಕ ಒತ್ತಡ ಎದುರಾಗಬಹುದು. ಆಪ್ತರೊಂದಿಗೆ ಮನದಾಳದ ಮಾತು ಹಂಚಿಕೊಂಡರೆ ನೆಮ್ಮದಿ ಸಿಗಲಿದೆ.
ಮೀನ
ಖಾಸಗಿ ಬದುಕಿನ ಒತ್ತಡ ನಿಧಾನವಾಗಿ ಕಡಿಮೆಯಾಗಲಿದೆ. ನಿಮ್ಮ ಮೇಲೆ ಎಲ್ಲರ ಗಮನ ಇರಬಹುದು. ಕೆಲವರು ನಿಮ್ಮ ವೈಫಲ್ಯ ಬಯಸಿದರೂ ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು ನಿಮ್ಮದೇ.



