August 13, 2026
Thursday, August 13, 2026
spot_img

WEIGHT LOSS | ಯಾವ ಟೈಮ್‌ ಆದ್ರೂ ಒಕೆ ಆದರೆ ಈ ಸಮಯದಲ್ಲಿ ಮಾತ್ರ ತೂಕ ನೋಡ್ಕೊಂಡು ಬೇಜಾರಾಗ್ಬೇಡಿ

ಯಾವ ಸಮಯದಲ್ಲಿ ತೂಕವನ್ನು ಚೆಕ್‌ ಮಾಡಬೇಕು ಅನ್ನೋದನ್ನು ಸರಿಯಾಗಿ ತಿಳ್ಕೊಳೋದು ಮುಖ್ಯ. ಖಾಲಿಹೊಟ್ಟೆಯಲ್ಲಿ ಕಾಣುವ ತೂಕವೇ ಸರಿಯಾಗಿರುತ್ತದೆ. ಯಾವ ಸಮಯದಲ್ಲಿ ತೂಕವನ್ನು ನೋಡ್ಬೇಕು? ಯಾವಾಗ ನೋಡಬಾರದು? ಇಲ್ಲಿದೆ ಡೀಟೇಲ್ಸ್‌..


ಇನ್ನೂ ಬಾತ್‌ರೂಮ್‌ ಹೋಗಿ ಮಲವಿಸರ್ಜನೆ ಮಾಡಿಲ್ಲ ಎಂದಾದರೆ ಆಗ ತೂಕ ಚೆಕ್‌ ಮಾಡಬೇಡಿ. ವಾಶ್‌ರೂಮ್‌ಗೆ ಹೋಗಿ ಬಂದ ನಂತರ ಚೆಕ್‌ ಮಾಡಿದ್ರೆ ಸರಿಯಾದ ತೂಕ ಕಾಣಸಿಗುತ್ತದೆ.

ಹಿಂದಿನ ದಿನ ಜಾಸ್ತಿ ನೀರು ಕುಡಿದಿಲ್ಲ ಎಂದಾದರೆ ತೂಕ ಚೆಕ್‌ ಮಾಡಬೇಡಿ. ಇದು ಹೆಚ್ಚು ತೂಕ ಇದೆ ಎಂದು ತೋರಿಸುತ್ತದೆ.

ಪೀರಿಯಡ್ಸ್‌ ಆಗುವ ಎರಡು ದಿನದ ಮುಂಚೆ ತೂಕ ನೋಡಬೇಡಿ. ಹಾರ್ಮೋನ್ಸ್‌ ಬದಲಾವಣೆ ಇರುತ್ತದೆ. ಇದರಿಂದಾಗಿ ದೇಹ ನೀರನ್ನು ಹಿಡಿದು ಇಟ್ಟುಕೊಂಡಿರುತ್ತದೆ. ಬ್ಲೋಟಿಂಗ್‌ ಆಗುತ್ತದೆ.

ರಾತ್ರಿ ಲೇಟಾಗಿ ಊಟ ಮಾಡಿದ್ರೆ ಅಥವಾ ಹೆವಿಯಾದ ಊಟ ಮಾಡಿದ್ರೆ ಬೆಳಗ್ಗೆ ತೂಕ ನೋಡಬೇಡಿ. ಇದು ನಿಮಗೆ ಬೇಸರ ತರಿಸುತ್ತದೆ.

ಒತ್ತಡದಲ್ಲಿ ಇದ್ದರೆ ಅಥವಾ ನಿನ್ನೆ ನಿದ್ದೆ ಇಲ್ಲ ಎಂದಾದರೆ ಆಗ ತೂಕ ನೋಡಬೇಡಿ. ಇದೇ ಅಭ್ಯಾಸ ಹೆಚ್ಚಾದರೆ ಹೊಟ್ಟೆಯ ತುಂಬಾ ಫ್ಯಾಟ್‌ ಇರುತ್ತದೆ.

ಟ್ರಿಪ್‌ ಹೋಗ್ಬಂದ ನಂತರ ವೇಟ್‌ ಚೆಕ್‌ ಮಾಡಬೇಡಿ. ಏನೇನೋ ತಿಂದಿರುತ್ತೀರಿ. ಸರಿಯಾಗಿ ವಾಶ್‌ರೂಮ್‌ಗೆ ಹೋಗಿರೋದಿಲ್ಲ. ಇದರಿಂದ ತೂಕ ಹೆಚ್ಚೇ ಕಾಣುತ್ತದೆ.

ವರ್ಕೌಟ್‌ ಆದ ನಂತರ ನಿಮ್ಮ ಮಸಲ್‌ ನೀರನ್ನು ಹಿಡಿದು ಇಟ್ಟುಕೊಂಡಿರುತ್ತದೆ. ಈ ಸಮಯದಲ್ಲಿಯೂ ತೂಕ ನೋಡಬೇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !