ಹೊಸದಿಗಂತ ವರದಿ, ಮಂಡ್ಯ:
ಬಿಸಿಲಿನ ಬೇಗೆ ಹಾಗೂ ಒಣ ಹವೆಯಿಂದಾಗಿ ಬಸವಳಿದಿದ್ದ ಸಕ್ಕರೆ ನಾಡು ಮಂಡ್ಯದ ಜನರಿಗೆ ವರುಣ ತಂಪೆರೆದಿದ್ದಾನೆ.
ಬುಧವಾರ ರಾತ್ರಿ ಭಾರೀ ಗಾಳಿ ಹಾಗೂ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ತಣ್ಣನೆಯ ವಾತಾವರಣದಿಂದಾಗಿ ಜನತೆ ಖುಷಿ ಅನುಭವಿಸಿದರು.
ಮಿಂಚು-ಗುಡುಗಿನ ಜೊತೆಗೆ ಭಾರೀ ಗಾಳಿಯೂ ಸಹ ಬೀಸುತ್ತಿದ್ದು ಇದರ ನಡುವೆ ಮಳೆ ಬಿದ್ದಿದ್ದು ಸಂತಸ ತಂದೊಡ್ಡಿತ್ತು. ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಮಳೆಯಲ್ಲೇ ನೆನೆಯುತ್ತಲೇ ತಮ್ಮ ಮನೆ ಕಡೆಗೆ ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದುದು ಕಂಡುಬಂತು.



