April 30, 2026
Thursday, April 30, 2026
spot_img

ಎಕ್ಸಿಟ್​ ಪೋಲ್ ಎಲ್ಲವೂ ಸುಳ್ಳು, ಈ ಬಾರಿ ಗೆಲುವು ನಮ್ಮದೇ: ಮಮತಾ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚ ರಾಜ್ಯಗಳ ಚುನಾವಣೆಯ ಮತದಾನ ಶಾಂತಿಯುತವಾಗಿ ಅಂತ್ಯಗೊಂಡ ಬಳಿಕ ಎಲ್ಲರ ದೃಷ್ಟಿ ಮೇ. 4ರಂದು ಫಲಿತಾಂಶದತ್ತ ನೆಟ್ಟಿದ್ದು, ಇದರ ನಡುವೆ ನಿನ್ನೆ ಹೊರಬಿದ್ದ ಎಕ್ಸಿಟ್​ ಪೋಲ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ನೀಡಿದೆ.

ಈ ಬೆನ್ನಲ್ಲೇ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಎಕ್ಸಿಟ್​ ಪೋಲ್ ಸಮೀಕ್ಷೆ ವಿರುದ್ಧ ಕಿಡಿಕಾರಿದ್ದು, ಇದೆಲ್ಲವೂ ಸೂಕ್ತ ಫಲಿತಾಂಶ ನೀಡುವುದಿಲ್ಲ. ಎಲ್ಲಾ ನಿರ್ಧಾರಗಳು ಮೇ. 4 ರಂದು ತಿಳಿಯಲಿದೆ ಎಂದು ತಿಳಿಸಿದರು.

ಈ ಬಾರಿಯ ಎಕ್ಸಿಟ್​ ಪೋಲ್​ಗಳು ಬಂಗಾಳದಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಹೇಳಿವೆ. ಇದರಿಂದ ಅಸಮಾಧಾನಗೊಂಡಿರುವ ದೀದಿ, ಕೇಂದ್ರ ಸರ್ಕಾರ ನಮಗೆ ಎಷ್ಟೇ ಸಮಸ್ಯೆ ತಂದಿಟ್ಟರು, ಬಂಗಾಳಿ ಜನರು ನಮ್ಮ ಕೈ ಹಿಡಿದೇ ಹಿಡಿಯುತ್ತಾರೆ. ಸುಮಾರು 226 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ನಾವು ಗೆಲುವನ್ನು ಸಾಧಿಸುವ ಮೂಲಕ ಮತ್ತೆ ಸರ್ಕಾರವನ್ನು ರಚಿಸಲಿದ್ದೆವೆ ಎಂದು ಹೇಳಿದ್ದಾರೆ.

ಈ ಬಾರಿ ಬಿಜೆಪಿ ಗೆಲುವಿಗಾಗಿ ಯಾವ ಹಂತಕ್ಕೂ ಹೋಗಲು ಸಿದ್ಧವಿದೆ. ಹಾಗಾಗಿ ಮೇ.4 ರಂದು ಮತ ಏಣಿಕೆ ದಿನ ನಾನು ಖುದ್ದಾಗಿ ಎಲ್ಲಾ ಕ್ಷೇತ್ರಗಳಿಗೆ ತೆರಳುವ ಯೋಜನೆ ಹೊಂದಿದ್ದೆನೆ. ನನಗೆ ನನ್ನ ಮತದಾರರ ಮೇಲೆ ನಂಬಿಕೆಯಿದೆ. ನಾವು ಸರ್ಕಾರವನ್ನು ರಚಿಸುವುದು ನಿಶ್ಚಿತ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !