October 15, 2026
Thursday, October 15, 2026
spot_img

ದಿನಭವಿಷ್ಯ: ವೃತ್ತಿಜೀವನದಲ್ಲಿ ಉನ್ನತಿ ಸಿಗಲಿದ್ದು, ಅಡ್ಡಿ-ಆತಂಕಗಳು ಸಂಪೂರ್ಣ ದೂರಾಗಲಿವೆ

ಮೇಷ
ವೃತ್ತಿಯಲ್ಲಿ ಉನ್ನತಿ. ನಿಮ್ಮ ಪ್ರಗತಿಗೆ ಇದ್ದ ಅಡ್ಡಿ ನಿವಾರಣೆ. ಮನೆಯಲ್ಲಿ ವಿರಸ ಅಂತ್ಯ. ಸಮರಸತೆ ಮೂಡಿ ನಿರಾಳ ಭಾವ. ಆರೋಗ್ಯ ಸುಸ್ಥಿರ.
ವೃಷಭ
ವೃತ್ತಿಯಲ್ಲಿ ಮತ್ತು ಮನೆಯಲ್ಲಿ ನಿಮಗೆ ಪೂರಕ ವಾತಾವರಣ. ಒತ್ತಡ ನಿವಾರಣೆ. ಕಷ್ಟವಾದರೂ ಕಾರ್ಯ ಸಂಪೂರ್ಣ.    
ಮಿಥುನ
ಹಣ ಗಳಿಕೆಗೆ ಆದ್ಯತೆ ಕೊಡುವಿರಿ. ಆದರೆ ಅಪರಿಚಿತ  ಕ್ಷೇತ್ರದಲ್ಲಿ ಹಣ ಹೂಡಬೇಡಿ. ಮನೆಯಲ್ಲಿ ಬಂಧುಗಳ ಒತ್ತಡ ಎದುರಿಸುವಿರಿ.    
ಕಟಕ
  ಯಾರ ಜತೆಗಾದರೂ ಭಿನ್ನಮತವಿದ್ದರೆ ಅದನ್ನು ಬೇಗ ನಿವಾರಿಸಿ.  ನಿಮಗೆ ಸಂಬಂಽಸದ ವಿಚಾರದಲ್ಲಿ ತಲೆ ಹಾಕಬೇಡಿ. ವೃತ್ತಿ ಒತ್ತಡ ಕಡಿಮೆಯಾಗಲಿದೆ.                
ಸಿಂಹ
 ಮುಕ್ತತೆಯಿಂದ  ಮಾತ್ರ ಸಂಬಂಧ ಸುಧಾರಣೆ ಸಾಧ್ಯ. ಭಾವನೆ ಅದುಮಿಟ್ಟು ಕೂರಬೇಡಿ. ಕಠಿಣ ಶ್ರಮ ದೈಹಿಕ ನೋವು ತಂದೀತು.    
ಕನ್ಯಾ
   ಉತ್ತಮವಾಗಿ ದಿನ ಆರಂಭಗೊಂಡರೂ ಸಂಜೆ ವೇಳೆಗೆ ನಿರಾಶೆ ಉಂಟಾಗಲಿದೆ. ನಿಮ್ಮ ಉದ್ದೇಶ ಆಂಶಿಕವಾಗಿ ಸಫಲತೆ ಕಾಣಲಿದೆ.    
ತುಲಾ
 ಕಾಲಮಿತಿಯಲ್ಲಿ ನಿಮ್ಮ ಯೋಜನೆ ಪೂರೈಸಬೇಕಾದ ಒತ್ತಡ.  ಭಾವುಕ ಸನ್ನಿವೇಶದಲ್ಲಿ ನಿಮ್ಮ ದೌರ್ಬಲ್ಯ  ಬಹಿರಂಗವಾದೀತು.            
ವೃಶ್ಚಿಕ
 ಇತರರ ಕೆಟ್ಟ ವರ್ತನೆ ನಿಮ್ಮ ದಿನ ಹಾಳು ಮಾಡಲು ಅವಕಾಶ ಕೊಡಬೇಡಿ. ಹಳೆ ಸ್ನೇಹಿತನ ಭೇಟಿ ಸಂಭವ. ಸ್ವಾಸ್ಥ್ಯ ಸುಧಾರಣೆ.      
ಧನು
 ನಿಮ್ಮ ಇಷ್ಟಕ್ಕೆ ಹಿರಿಯರ ಸಮ್ಮತಿ. ನಿಮ್ಮ ಅಭೀಷ್ಟ ಈಡೇರಿಕೆ. ಅನ್ಯರ ಜತೆ ಖಾಸಗಿ ವಿಚಾರ ಹಂಚಿಕೊಳ್ಳಬೇಡಿ. ರಹಸ್ಯ ಕಾಪಾಡಿಕೊಳ್ಳಿ.          
ಮಕರ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ. ಹತಾಶ ಪರಿಸ್ಥಿತಿ ಕರಗಿ, ಆಶಾವಾದ ಮೂಡಲಿದೆ. ಕ್ಲಿಷ್ಟಕರ ಪರಿಸ್ಥಿತಿ ಒಮ್ಮೆಗೆ ಪರಿಹಾರ ಕಾಣಲಿದೆ.      
ಕುಂಭ
ವೃತ್ತಿಯಲ್ಲಿ ಮುಖ್ಯ ನಿರ್ಧಾರ ಇಂದು ತಾಳದಿರಿ. ಸಂಘರ್ಷ ಮುಂದುವರಿಸುವ ಬದಲು ಸಂಧಾನ ಒಳಿತು.  ಕಿವಿಮಾತು ಆಲಿಸಿ.                  
 ಮೀನ
ಬಹುಮುಖ್ಯ ನಿರ್ಧಾರ ತಾಳಬೇಕಾದ ಪ್ರಸಂಗ ಉಂಟಾದೀತು. ಹಿಂಜರಿಕೆ ಬೇಡ. ಕೌಟುಂಬಿಕ ಒತ್ತಡ ನೆಮ್ಮದಿ ಭಂಗ ಮಾಡಬಹುದು.    

Must Read