ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಮತದಾನ ಮುಗಿದು ಎಲ್ಲರ ನೋಟ ಮೇ.೪ ರಂದು ಪ್ರಕಟವಾಗುವ ಫಲಿತಾಂಶದ ಮೇಲೆ ನೆಟ್ಟಿದ್ದು, ಇದರ ನಡುವೆ ಪ್ರಕಟವಾದ ಎಕ್ಸಿಟ್ ಫೂಲ್ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.
ಇತ್ತ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲಿದೆ ಎಂಬ ಸಮೀಕ್ಷೆ ದೇಶದಲ್ಲಿ ಒಂದು ರೀತಿಯ ವಾತಾವರಣ ಸೃಷ್ಟಿಸಿದೆ. ಅತ್ತ ಈ ಭವಿಷ್ಯ ಕೇಳಿ ಬಾಂಗ್ಲಾದೇಶದಲ್ಲೂ ಆತಂಕ ಶುರುವಾಗಿದ್ದು, ಅಕ್ರಮ ವಲಸಿಗರು ಮತ್ತೆ ಢಾಕಾವನ್ನು ಪ್ರವೇಶಿಸಲಿದೆ ಎಂದು ಬಾಂಗ್ಲಾ ಸಂಸದ ಅಖ್ತರ್ ಹುಸೇನ್ ಹೇಳಿದ್ದಾರೆ.
ಈ ಕುರಿತು ಬಾಂಗ್ಲಾ ಸಂಸತ್ತಿನಲ್ಲಿ ಮಾತನಾಡಿದ ಅಖ್ತರ್ ಹುಸೇನ್, ಬಂಗಾಳದಲ್ಲಿ ಬಾಂಗ್ಲಾದೇಶದ ಬಹುತೇಕ ವಲಸಿಗರು ನೆಲೆಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ, ಬಂಗಾಳದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು, ಇಲ್ಲಿಗೆ ಮರಳುತ್ತಾರೆ. ಇದು ದೇಶದಲ್ಲಿ ದೊಡ್ಡ ನಿರಾಶ್ರಿತರ ಬಿಕ್ಕಟ್ಟನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾ ಸಂಸದ ಮಾತಿಗೆ ಬಿಜೆಪಿ ಸಂಸದ ನಿಶಿಕಾಂತ್ ಧುಬೆ ತಿರುಗೇಟು ನೀಡಿದ್ದು, ಬಾಂಗ್ಲಾದೇಶದ ಸಂಸದರೇ ಹೇಳುತ್ತಾರೆ,ಬಿಜೆಪಿ ಗೆದ್ದರೆ ಅಕ್ರಮ ವಲಸಿಗರನ್ನು ಒದ್ದು ಓಡಿಸುತ್ತಾರೆಂದು. ಇದರಿಂದ ತಿಳಿಯುತ್ತದೆ ಹೇಗೆ ಇಷ್ಟು ವರ್ಷ ಮಮತಾ ಬ್ಯಾನರ್ಜಿ ಗೆಲ್ಲುತ್ತಿದ್ದರು ಎಂದು ಗೊತ್ತಾಗುತ್ತಿದೆ ಎಂದು ಕಿಡಿಕಾರಿದ್ದಾರೆ.



