May 2, 2026
Saturday, May 2, 2026
spot_img

ಓದಿದ್ರೂ ಕೆಲಸ ಸಿಗ್ತಿಲ್ಲ, ತಂದೆಗೆ ಹೊರೆಯಾಗಬಾರದೆಂದು ಅಮೆರಿಕದಲ್ಲಿ ಮಗ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದ ವಿದ್ಯಾರ್ಥಿಯೊಬ್ಬ ಅಮೆರಿಕಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

26 ವರ್ಷದ ಇರಗಾನಬೋಯಿನ ಚಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಕರ್ನೂಲ್ ಜಿಲ್ಲೆಯ ನಿವಾಸಿಯಾದ ಚಂದು, ಇತ್ತೀಚೆಗಷ್ಟೇ ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿದ್ದರು. ವರದಿಗಳ ಪ್ರಕಾರ, ಚಂದ್ರು ಕಳೆದ ಕೆಲವು ವಾರಗಳಿಂದ ಸಕ್ರಿಯವಾಗಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು, ಆದರೆ ಅವರಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ.

ಇದನ್ನೂ ಓದಿ:

ಕುಟುಂಬದ ಮೂಲಗಳು ಮತ್ತು ಸಮುದಾಯದ ಸದಸ್ಯರು ನೀಡಿದ ಮಾಹಿತಿ ಪ್ರಕಾರ, ಚಂದು ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ಕರ್ನೂಲ್‌ನಲ್ಲಿರುವ ತಮ್ಮ ಕುಟುಂಬದ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವುದಕ್ಕೆ ಅವರು ನೊಂದಿದ್ದರು. ವಿಶೇಷವಾಗಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ತಮ್ಮ ತಂದೆ ಪಡುತ್ತಿರುವ ಕಷ್ಟಗಳನ್ನು ಕಂಡು ಅವರು ಬಹಳ ವ್ಯಥೆ ಪಟ್ಟಿದ್ದರು ಎಂದು ತಿಳಿದುಬಂದಿದೆ.

ನಿರಂತರ ನಿರುದ್ಯೋಗದ ಒತ್ತಡದಿಂದಾಗಿ ಚಂದು ಅಮೆರಿಕಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತ ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !