ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ 44 ನವಿಲುಗಳು ಮೃತಪಟ್ಟಿದ್ದವು, ಇವುಗಳಿಗೆ ಹಕ್ಕಿ ಜ್ವರ ಬಾಧಿಸಿತ್ತು. ಅದೇ ರೀತಿ ಇದೀಗ 30 ಕೋಳಿಗಳೂ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಹಕ್ಕಿಜ್ವರದ ಆತಂಕ ಎದುರಾಗಿದೆ.
ಮೃತಪಟ್ಟಿರುವ ಕೋಳಿಗಳ ಮೃತದೇಹವನ್ನು ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ರಿಸಲ್ಟ್ ಬಂದ ನಂತರವಷ್ಟೇ ಹಕ್ಕಿ ಜ್ವರ ಇರುವುದು ದೃಢವಾಗಲಿದೆ.
ಇದೇ ಊರಿನಲ್ಲಿ ಕೆಲವೇ ದಿನಗಳಲ್ಲಿ 44 ನವಿಲುಗಳು ಮೃತಪಟ್ಟಿದ್ದವು. ಮೊದಲಿಗೆ ಇವು ಬಿಸಿಲಿನ ಝಳಕ್ಕೆ, ನೀರಿಲ್ಲದೆ ನಿರ್ಜಲೀಕರಣದಿಂದಾಗಿ ಮೃತಪಟ್ಟಿದ್ದವು ಎನ್ನಲಾಗಿತ್ತು. ಆದರೆ ಪರೀಕ್ಷೆಯ ವರದಿ ನಂತರ ನವಿಲುಗಳಿಗೆ ಹಕ್ಕಿ ಜ್ವರ ಇರುವುದು ಗೊತ್ತಾಗಿದೆ.
ಈಗಾಗಲೇ ತುಮಕೂರಿಗೆ ಹೈ ಅಲರ್ಟ್ ಘೋಷಣೆ ಮಾಡಿದ್ದು, ಜಿಲ್ಲಾಧಿಕಾರಿಗಳು ಕೆಲ ಹಳ್ಳಿಗಳ ಜನರಿಗೆ ಹೆಚ್ಚು ಜಾಗ್ರತೆ ವಹಿಸುವಂತೆ ಸೂವನೆ ನೀಡಿದ್ದಾರೆ. ಕಲ್ಲಳ್ಳಿ, ಕೋಡಿಹಳ್ಳಿ, ಹುಣ್ಣೆನಹಳ್ಳಿ, ಬೊಮ್ಮನಹಳ್ಳಿ ಹಾಗೂ ಬೈರಸಂದ್ರ ಹಳ್ಳಿಗಳನ್ನು ಕಂಟೋನ್ಮೆಂಟ್ ಝೋನ್ಗಳಾಗಿ ಘೋಷಣೆ ಮಾಡಲಾಗಿದೆ.



