ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಪವಿತ್ರ ಅಮರನಾಥ ಯಾತ್ರೆ ಆರಂಭಕ್ಕೂ ಮುನ್ನವೇ, ಇಬ್ಬರು ಭಕ್ತರು ಶ್ರೀ ಅಮರನಾಥ ಗುಹೆಯನ್ನು ತಲುಪಲು ‘ದಂಡವತ್ ಯಾತ್ರೆ’ಯನ್ನು ಕೈಗೊಂಡಿದ್ದಾರೆ.
ಜಿತೇನ್ ರಜಪೂತ್ ಮತ್ತು ಅಮಿತ್ ರಜಪೂತ್ ಜುಲೈ 23, 2025 ರಂದು ತಮ್ಮ 1700 ಕಿಲೋಮೀಟರ್ ಪ್ರಯಾಣವನ್ನು ಪ್ರಾರಂಭಿಸಿದ್ದು, ಇದೀಗ 10 ತಿಂಗಳ ನಂತರ ಜಮ್ಮು- ಕಾಶ್ಮೀರದ ರಾಂಬನ್ ಜಿಲ್ಲೆಯ ಚಂದರ್‌ಕೋಟ್ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದ್ದು ಇವರ ಈ ಯಾತ್ರೆಯ ದೃಶ್ಯವಳಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕಾಶ್ಮೀರ ಹಿಮಾಲಯದಲ್ಲಿ ಪ್ರತಿ ವರ್ಷ ನಡೆಯುವ ಪ್ರಸಿದ್ಧ ಹಿಂದು ತೀರ್ಥಯಾತ್ರೆ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 15 ರಂದು ಅಧಿಕೃತವಾಗಿ ಪ್ರಾರಂಭವಾಗಿದ್ದು. ಈ ವರ್ಷದ, ಅಮರನಾಥ ತೀರ್ಥ ಯಾತ್ರೆಯು ಜುಲೈ 3 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ.
ಯಾತ್ರೆಗೆ ನೋಂದಣಿ ಪ್ರಕ್ರಿಯೆಯು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳ ಮೂಲಕ ಲಭ್ಯವಿರುತ್ತದೆ. ಯಾತ್ರಿಕರು ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು.



