October 11, 2026
Sunday, October 11, 2026
spot_img

ಬಿಡದಿ ಟೌನ್‌ಶಿಪ್‌ ಬಗ್ಗೆ ಡಿಕೆಶಿ ಜತೆ ಚರ್ಚೆ ಮಾಡೋದಕ್ಕೆ ಅಹಂ ಸಮಸ್ಯೆ ಇಲ್ಲ: ಎಚ್‌ಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಡದಿ ಟೌನ್‌ಶಿಪ್‌ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಈ ಬೆನ್ನಲ್ಲೇ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದ್ದು, ನನಗೆ ಸಿಎಂ ಡಿ.ಕೆ. ಶಿವಕುಮಾರ್‌ ಜೊತೆ ಮಾತನಾಡೋಕೆ ಯಾವ ಅಹಂ ಇಲ್ಲ ಎಂದು ಹೇಳಿದ್ದಾರೆ.

ಡಿಕೆಶಿ ಅವರ ಆಹ್ವಾನಕ್ಕೆ ನಾನು ಉತ್ತರ ನೀಡಿದ್ದೇನೆ. ಜೂನ್‌ ೨೬ರಂದು ನನಗೆ ಬೇರೆ ಕೆಲಸಗಳು ಶೆಡ್ಯೂಲ್‌ ಆಗಿವೆ. ಹೀಗಾಗಿ ಜೂನ್ 27ರಂದು ಸಭೆ ಏರ್ಪಡಿಸಿ ನಾನು ಬರುತ್ತೇನೆ ಎಂದಿದ್ದಾರೆ. ನಾನು ಸಭೆಗೆ ಬರೋಕೆ ಸಮಸ್ಯೆಯಿಲ್ಲ, ನನಗೆ ಯಾವ ಅಹಂ ಕೂಡ ಇಲ್ಲ. ಆದರೆ ಈ ಸಭೆ ನನ್ನ ಜೊತೆ ಆಗಬೇಕಿಲ್ಲ ರೈತರ ಜೊತೆ ಆಗಬೇಕು. ಇದು ಅವರ ಸಮಸ್ಯೆ, ಪರಿಹಾರ ಬೇಕಿರೋದು ಅವರಿಗೆ. ಸರ್ಕಾರ ಮನಸ್ಸು ಮಾಡಿದರೆ ಈ ಸಮಸ್ಯೆ ಬಗೆಹರಿಸೋಕೆ ಹತ್ತೇ ನಿಮಿಷ ಸಾಕು ಎಂದಿದ್ದಾರೆ.

ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡಿರುವುದರಿಂದ, ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶೇ. 70 ರಷ್ಟು ರೈತರು ತಮ್ಮ ಭೂಮಿಯನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ, ಶೇ. 75 ರಷ್ಟು ರೈತರು ಒಪ್ಪಿಲ್ಲ ಎಂದು ಹೇಳುತ್ತಾರೆ. ಇದನ್ನು ಅವರ ಸಮ್ಮುಖದಲ್ಲಿ ಚರ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

Must Read