July 16, 2026
Thursday, July 16, 2026
spot_img

ಸರ್ಕಾರದ ಖಜಾನೆ ತುಂಬಿಸೋಕೆ ಸಹಾಯ ಮಾಡ್ತಿರೋ ಬಿಯರ್‌ ಪ್ರಿಯರು! ಅಬಕಾರಿ ಆದಾಯ ಶೇ. 14.84 ರಷ್ಟು ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸರ್ಕಾರ ಕಡಿಮೆ ಪ್ರಮಾಣದ ಆಲ್ಕೋಹಾಲ್‌ ಹೊಂದಿರುವ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯನ್ನು ಕಡಿಮೆ ಮಾಡಿತ್ತು. ಈ ಸ್ಟ್ರಾಟರ್ಜಿ ವರ್ಕ್‌ ಆಗಿದ್ದು, ಬಿಯರ್‌ ಪ್ರಿಯರು ಸರ್ಕಾರದ ಖಜಾನೆ ತುಂಬಿಸೋಕೆ ಸಹಾಯ ಮಾಡಿದ್ದಾರೆ.

ಹೊಸ ದರ ಪಟ್ಟಿ ಅನುಷ್ಠಾನಕ್ಕೆ ಬಂದ ಮೇ 11 ರಿಂದ ಜೂನ್ 11 ರವರೆಗಿನ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ಅಬಕಾರಿ ಕಂದಾಯ ಸಂಗ್ರಹಣೆ ಬರೋಬ್ಬರಿ ಶೇ 14.84 ರಷ್ಟು ಹೆಚ್ಚಳವಾಗಿದೆ.ಮೇ 11 ರಿಂದ ಜೂನ್ 11 ರವರೆಗಿನ ಅವಧಿಯಲ್ಲಿ ಬರೋಬ್ಬರಿ 54.6 ಲಕ್ಷ ಕೇಸ್ ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (35.3 ಲಕ್ಷ ಕೇಸ್) ಭಾರೀ ಏರಿಕೆ ದಾಖಲಾಗಿದೆ.

ಆದರೆ, ಇದೇ ಅವಧಿಯಲ್ಲಿ ಭಾರತೀಯ ತಯಾರಿಕೆಯ ವಿದೇಶಿ ಮದ್ಯ ಮಾರಾಟದಲ್ಲಿ ಶೇ 0.35 ರಷ್ಟು ಅಲ್ಪ ಕುಸಿತ ಕಂಡುಬಂದಿದೆ. ಕಳೆದ ವರ್ಷ 54.74 ಲಕ್ಷ ಕೇಸ್ ಇದ್ದ ಐಎಂಎಲ್ ಮಾರಾಟ ಈ ಬಾರಿ 54.55 ಲಕ್ಷ ಕೇಸ್‌ಗಳಿಗೆ ಇಳಿಕೆಯಾಗಿದೆ. ಬಿಯರ್ ಬಳಕೆಯ ಹೆಚ್ಚಳದಿಂದಾಗಿ ರಾಜ್ಯದ ಒಟ್ಟು ಅಬಕಾರಿ ಆದಾಯವು ಕಳೆದ ವರ್ಷದ 3,261.24 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಈ ಬಾರಿ 3,745.14 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !