ಮೇಷ
ಮನಸ್ಸಿನ ಶಾಂತಿ ಕಾಯ್ದುಕೊಳ್ಳಲು ಆದ್ಯತೆ ಕೊಡಿ. ಸಂಘರ್ಷಕ್ಕೆ ಇಳಿಯದಿರಿ. ಹೊಸ ವ್ಯವಹಾರ ಆರಂಭಕ್ಕೆ ಕಾಲ ಸುಸೂತ್ರವಾಗಿದೆ.
ವೃಷಭ
ನಿಮ್ಮ ಮೃದು ಸ್ವಭಾವ ಇತರರು ನಿಮ್ಮನ್ನು ದುರ್ಬಳಕೆ ಮಾಡಲು ಅವಕಾಶ ನೀಡುತ್ತದೆ. ಕಠಿಣವಾಗಿ ವರ್ತಿಸಲು ಕಲಿಯಿರಿ.
ಮಿಥುನ
ಕೆಲ ಅಹಿತಕರ ಪ್ರಸಂಗದಿಂದಾಗಿ ನಿಮ್ಮ ಆತ್ಮವಿಶ್ವಾಸ ಕುಸಿತ. ಹೋರಾಟ ಮನೋಭಾವ ಬಿಡಬೇಡಿ. ಇತರರ ಓಲೈಕೆ ಕಾರ್ಯ ಬಿಟ್ಟುಬಿಡಿ.
ಕಟಕ
ಶುಭ ಸುದ್ದಿ ಕೇಳುವಿರಿ. ಕೌಟುಂಬಿಕ ಸಂಭ್ರಮ. ಆರೋಗ್ಯ ಸಮಸ್ಯೆ ನಿವಾರಣೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ಯೋಜಿಸಿ.
ಸಿಂಹ
ಹಳಬರ ಭೇಟಿ ಸಂಭವ. ಹಳೆ ನೆನಪು ಕೆದುಕುವಿರಿ. ನಿಮ್ಮ ವ್ಯವಹಾರದಲ್ಲಿ ಅಡ್ಡಿ ಒದಗೀತು. ಸಹನೆಯ ನಡೆ ಒಳ್ಳೆಯದು.
ಕನ್ಯಾ
ಅಹಿತಕರ ಪ್ರಸಂಗ ಎದುರಿಸುವಿರಿ. ಜಾಣ್ಮೆಯಿಂದ ನಿಭಾಯಿಸಿ. ವ್ಯಕ್ತಿಯೊಬ್ಬರ ಜತೆ ಸ್ನೇಹ ಬೆಳೆದೀತು. ಭಾವುಕ ಸನ್ನಿವೇಶಕ್ಕೆ ಸಾಕ್ಷಿ.
ತುಲಾ
ಸಂಘಟಿತ ಕಾರ್ಯ ದಿಂದ ಯಶಸ್ಸು. ಏಕಾಂಗಿ ಪ್ರಯತ್ನ -ಲ ನೀಡದು. ಕೇಳಿದವರಿಗೆಲ್ಲ ಹಣ ನೀಡಬೇಡಿ. ಕೌಟುಂಬಿಕ ಹೊಣೆ ಹೆಚ್ಚಳ.
ವೃಶ್ಚಿಕ
ಕಲಾವಿದರಿಗೆ ಉತ್ತಮ ದಿನ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ನೆಂಟರಿಷ್ಟರ ಸಮ್ಮುಖ ಆತ್ಮೀಯ ಕಾಲಕ್ಷೇಪ. ಆರ್ಥಿಕ ಉನ್ನತಿ.
ಧನು
ಸ್ಪಷ್ಟವಾಗಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಕಹಿಸತ್ಯ ಹೇಳಲು ಹಿಂಜರಿಕೆ ಬೇಡ. ವ್ಯವಹಾರದಲ್ಲಿ ತುಸು ಹಿನ್ನಡೆ ಉಂಟಾದೀತು.
ಮಕರ
ಮುತುವರ್ಜಿ ಯಿಂದ ಕೆಲಸ ನಿರ್ವಹಿಸಿ. ಉದಾಸೀನತೆ ಕಾರ್ಯ ಕೆಡಿಸಬಹುದು. ಸಂಬಂಧ ಪಡದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ.
ಕುಂಭ
ಹಣದ ವಿವಾದ ಪರಿಹಾರ. ಸಂಬಂಧದಲ್ಲಿ ಯಾವುದೇ ಅನುಮಾನ ಇಟ್ಟುಕೊಳ್ಳದಿರಿ. ಸಂವಹನ ಕೊರತೆಯಿಂದ ಆಪ್ತರ ಜತೆ ಮುನಿಸು ಸಂಭವ.
ಮೀನ
ಕಠಿಣ ಪರಿಸ್ಥಿತಿ ಒದಗಿದರೂ ಆತ್ಮವಿಶ್ವಾಸ ಬಿಡಬೇಡಿ. ಎಲ್ಲ ಕಷ್ಟವೂ ತಾತ್ಕಾಲಿಕ. ಅನಿರೀಕ್ಷಿತ ನೆರವು ಒದಗಲಿದೆ. ಬಂಧು ಭೇಟಿಯಿಂದ ಸಂತಸ.



