May 3, 2026
Sunday, May 3, 2026
spot_img

ಮತ ಎಣಿಕೆಗೂ ಮುನ್ನ ದೀದಿ ಕ್ಷೇತ್ರದಲ್ಲಿ ಗಲಾಟೆ: ಎಣಿಕೆ ಕೇಂದ್ರದ ಭದ್ರತೆ ಕುರಿತು ಟಿಎಂಸಿ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಉದ್ವಿಗ್ನತೆ ತಾರಕ್ಕೇರಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಕ್ಷೇತ್ರದ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಭಾರಿ ಗಲಾಟೆ ನಡೆದಿದ್ದು, ಭದ್ರತೆ ಮತ್ತು ಇವಿಎಂ ಸುರಕ್ಷತೆ ಬಗ್ಗೆ ಹೊಸ ಪ್ರಶ್ನೆಗಳು ಉದ್ಭವಿಸಿವೆ.

ಬಿಜೆಪಿ ಧ್ವಜ ಹೊಂದಿದ್ದ ಎರಡು ವಾಹನಗಳು ಎಣಿಕೆ ಕೇಂದ್ರದ ಆವರಣ ಪ್ರವೇಶಿಸಿದ್ದಕ್ಕೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಟ್ರಾಂಗ್ ರೂಂ ಬಳಿಗೆ ವಾಹನಗಳು ಹೇಗೆ ತಲುಪಿದವು ಎಂಬ ಪ್ರಶ್ನೆ ಎತ್ತಿದ ಟಿಎಂಸಿ ಬೆಂಬಲಿಗರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:

ಇದಕ್ಕೂ ಮುನ್ನ ಅನಧಿಕೃತ ವ್ಯಕ್ತಿಗಳು ಸ್ಟ್ರಾಂಗ್ ರೂಂ ಪ್ರದೇಶ ಪ್ರವೇಶಿಸಿದ್ದಾರೆ ಎಂಬ ಆರೋಪದಡಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಮತ್ತೆ ಗೊಂದಲ ಸೃಷ್ಟಿಯಾಗಿದೆ.

ಆದರೆ ಪರಿಶೀಲನೆ ವೇಳೆ ವಾಹನಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೂ ಟಿಎಂಸಿ ಇವಿಎಂ ಭದ್ರತೆ ಕುರಿತ ಆತಂಕ ಮುಂದುವರಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !