June 20, 2026
Saturday, June 20, 2026
spot_img

VIRAL | ಗರ್ಲ್‌ಫ್ರೆಂಡ್‌ ಫೋನ್‌ ತೆಗೆದಿಲ್ಲ ಎಂದು ಇಡೀ ಊರಿನ ಕರೆಂಟ್‌ ಕಟ್‌ ಮಾಡಿದ ಲವರ್‌ ಬಾಯ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀತಿ ಹುಚ್ಚಲ್ಲ, ಆದರೆ ಪ್ರೀತಿಸೋರ ತಲೆ ಎಲ್ಲೆಲ್ಲಿ ಓಡುತ್ತದೋ ತಿಳಿಯೋದಿಲ್ಲ! ಇಲ್ಲೊಬ್ಬ ಪಾಗಲ್‌ ಪ್ರೇಮಿ ತನ್ನ ಹುಡುಗಿ ಫೋನ್‌ ಎತ್ತಿಲ್ಲ ಎಂದು ಇಡೀ ಗ್ರಾಮದ ಕರೆಂಟ್‌ನ್ನೇ ಕಟ್‌ ಮಾಡಿದ್ದಾನೆ.

ವಿದ್ಯುತ್ ಕಂಬ ವೇರಿದ ಯುವಕ ಒಂದು ಭಾಗದ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಕಟರ್ ಮೂಲಕ ಕತ್ತರಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಯುವಕ ತನ್ನ ಪ್ರೇಯಸಿ ತನ್ನ ಮೊಬೈಲ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹತಾಶೆಗೊಂಡಿದ್ದ. ಸಾಕಷ್ಟು ಬಾರಿ ಕರೆ ಮಾಡಿದರೂ ಆಕೆ ತನ್ನ ಕರೆ ಸ್ವೀಕರಿಸುತ್ತಿಲ್ಲ. ಬದಲಿಗೆ ಆಕೆಯ ಫೋನ್ ಸತತವಾಗಿ ಎಂಗೇಜ್ ಬರುತ್ತಿದೆ ಎಂದು ಆಕ್ರೋಶಗೊಂಡಿದ್ದ. ಇದೇ ಕೊಪದಿಂದ ಆಕೆಯ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬ ಏರಿ ನೋಡ ನೋಡುತ್ತಲೇ ಹೈಟೆನ್ಷನ್ ವಿದ್ಯುತ್ ತಂತಿಗಳನ್ನುಕತ್ತರಿಸಿ ಹಾಕಿದ್ದಾನೆ.

ಯುವಕನ ಈ ಕೃತ್ಯದಿಂದ ಇಡೀ ಗ್ರಾಮಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.ಇನ್ನು ಯುವಕನ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಕೆಲವರು ಪ್ರೀತಿಯ ನಶೆಯಲ್ಲಿ ವಿದ್ಯುತ್ ಕಂಬ ಏರಿದ ಯುವಕ ಅಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರೆ ಗತಿ ಏನು ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಆಕೆ ಮಾಡಿದ ತಪ್ಪಿಗೆ ಇಡೀ ಗ್ರಾಮದ ವಿದ್ಯುತ್ ಸರಬರಾಜು ನಿಲ್ಲಿಸಿದ್ದು ತಪ್ಪು ಎಂದು ಟೀಕಿಸಿದ್ದಾರೆ.

ಮತ್ತೆ ಕೆಲವರು ವೈಯುಕ್ತಿಕ ಸಮಸ್ಯೆಗಳಿಂದ ವಿದ್ಯುತ್ ಕಂಬ ಏರಿ ತಂತಿ ಕತ್ತರಿಸಿದರೆ ವಿದ್ಯುತ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !