ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿವೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಗಮನಾರ್ಹ ಪ್ರದರ್ಶನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ. ಜನರ ತೀರ್ಪು ಹೊಸ ರಾಜಕೀಯ ದಿಕ್ಕಿನ ಸೂಚನೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ಈ ಬಾರಿಯ ಮತದಾರರು ಪರಂಪರೆಯ ರಾಜಕೀಯಕ್ಕಿಂತ ಹೊಸ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಹಣದ ಆಮಿಷ ಮತ್ತು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿ ಜನರು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು.
ಇದನ್ನೂ ಓದಿ:
ಮೊದಲ ಚುನಾವಣೆಯಲ್ಲೇ ಟಿವಿಕೆ ಪಕ್ಷ ಸಾಧಿಸಿದ ಮುನ್ನಡೆ ಗಮನಾರ್ಹವಾಗಿದ್ದು, ವಿಜಯ್ ಅವರ ರಾಜಕೀಯ ಪ್ರವೇಶ ಹೊಸ ನಿರೀಕ್ಷೆ ಮೂಡಿಸಿದೆ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು. ಇದೇ ವೇಳೆ, ಎನ್‌ಡಿಎ ಅಭ್ಯರ್ಥಿಗಳು ಕೂಡ ಕಠಿಣ ಪೈಪೋಟಿ ನೀಡಿರುವುದನ್ನು ಉಲ್ಲೇಖಿಸಿ, ಸೋಲಿನಿಂದ ಹಿಂಜರಿಯದೆ ಮತ್ತಷ್ಟು ಬಲವಾಗಿ ಹೋರಾಟ ಮುಂದುವರಿಸುವ ವಿಶ್ವಾಸವನ್ನು ಪಕ್ಷದ ಕಾರ್ಯಕರ್ತರಲ್ಲಿ ತುಂಬಿದರು.



